ಕ್ಷೇತ್ರಪತಿ ಸಿನಿಮಾವನ್ನು ಶ್ರೀಕಾಂತ್ ಕಟಗಿ ನಿರ್ದೇಶನ ಮಾಡುತ್ತಿದ್ದಾರೆ. ಹೊಂದಿಸಿ ಬರೆಯಿರಿ ಜೋಡಿ ನವೀನ್ ಶಂಕರ್ ಹಾಗೂ ಅರ್ಚನಾ ಜೋಯಿಸ್ 'ಕ್ಷೇತ್ರಪತಿ' ಚಿತ್ರದಲ್ಲಿ ಮತ್ತೆ ಒಂದಾಗಿದೆ. 'ಎ ರೈಟ್ ಫೈಟ್ ಫಾರ್ ದ ರೈಟ್' ಎಂದರೆ ಹಕ್ಕಿಗಾಗಿ ಒಂದೊಳ್ಳೆ ಹೋರಾಟ ಎಂದರ್ಥ. ಚಿತ್ರದ ಪೋಸ್ಟರ್‌ನಲ್ಲಿ 'ಎ ರೈಟ್ ಫೈಟ್ ಫಾರ್ ದ ರೈಟ್' ಎಂಬ ಸಾಲುಗಳಿದ್ದು, ಇದೊಂದು ಹೋರಾಟದ ಕತೆಯಾಗಿದೆ. ರವಿ ಬಸ್ರೂರು ಸಂಗೀತ ಸಂಯೋಜನೆ ಮಾಡಲಿದ್ದಾರೆ. ಉತ್ತರ ಕರ್ನಾಟಕ ಭಾಗದ ರೈತರ ಬದುಕಿನ ಕಥೆಯನ್ನು ತೆರೆಮೇಲೆ ತರಲಾಗಿದೆ. ಅನ್ನದಾತನ ಸಮಸ್ಯೆಗಳು, ಹೋರಾಟದ ಬದುಕನ್ನು ಪವರ್‌ಫುಲ್ ತೆರೆಮೇಲೆ ತರಲಾಗಿದೆ. ಇದೊಂದು ಪಕ್ಕಾ ಜವಾರಿ ಶೈಲಿಯ ಸಿನಿಮಾ. ಉತ್ತರ ಕರ್ನಾಟಕದ ಭಾಗದ ಕಥೆಯನ್ನೇ ಇಟ್ಟುಕೊಂಡು ಸಿನಿಮಾವನ್ನು ಹೆಣೆಯಲಾಗಿದೆ.
ಕಥೆ: ಮಾರುಕಟ್ಟೆಯಲ್ಲಿ ತರಕಾರಿ ಮಾರುವ ದೃಶ್ಯದಿಂದ ಸಿನಿಮಾ ಆರಂಭ ಆಗುತ್ತೆ. ಇತ್ತ ಹೀರೊ ಇಂಜಿನಿಯರಿಂಗ್ ವಿದ್ಯಾರ್ಥಿ. ಈತ ವಿದೇಶಕ್ಕೆ ಹೋಗಿ ಅಲ್ಲಿ ಕೆಲಸ ಮಾಡಬೇಕು ಅಂತ ಕನಸು ಕಂಡಿರುತ್ತಾನೆ. ಇಂತಹ ಹುಡುಗ ರೈತನಾಗಿ ಹೇಗೆ ಬದಲಾಗುತ್ತಾನೆ? ರೈತರ ಪರ ಹೋರಾಟಕ್ಕೆ ಯಾಕೆ ಇಳಿಯುತ್ತಾನೆ ಅನ್ನೋದು ಸಿನಿಮಾ ಕಥೆ. ಅಂದ್ಹಾಗೆ ಹೀರೋ ಕೂಡ ರೈತಾಪಿ ಕುಟುಂಬದಿಂದನೇ ಬಂದಿರುತ್ತಾನೆ. ನಾಯಕನ ತಂದೆ ರೈತ. ಆದರೆ, ಯಾವುದೋ ಒಂದು ಸಂಕಷ್ಟ ಸಿಲುಕಿ ಸಾವನ್ನಪ್ಪುತ್ತಾರೆ. ಆಗ ಹೀರೋ ಊರಿಗೆ ಎಂಟ್ರಿ ಕೊಡುತ್ತಾನೆ. ಅಲ್ಲಿ ನಡೆಯುತ್ತಿರೋ ಅನ್ಯಾಯದ ವಿರುದ್ಧ ಹೋರಾಟಕ್ಕೆ ಇಳಿಯುತ್ತಾನೆ. ಮುಂದೆ ಏನೆಲ್ಲಾ ಆಗುತ್ತೆ ಅನ್ನೋದು ಸಿನಿಮಾದ ತಿರುಳು.