X
ಕುರುಕ್ಷೇತ್ರ
Epic | 09 Aug 2019 |
Kannada

ಕುರುಕ್ಷೇತ್ರ ಕಥೆ

ಪರಿಚಯ- ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ `ಕುರುಕ್ಷೇತ್ರ'ವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ `ಭೀಷ್ಮ'ನಾಗಿ, ರವಿಚಂದ್ರನ್ ಕ‍ಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ದರ್ಶನ್ ರ 50ನೇ ಚಿತ್ರ.

 

ಹಿನ್ನಲೆ- ಚಿತ್ರದ ಕಥೆ ರನ್ನನ `ಗಧಾಯುದ್ಧ' ಕೃತಿ ಆಧಾರಿತವಾಗಿದೆ. ಮಹಾಭಾರತದಲ್ಲಿ ಪಾಂಡವರು ಕೌರವರ ಮೋಸದಿಂದ ರಾಜ್ಯ ಕಳೆದುಕೊಂಡು 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತ ವಾಸ ಅನುಭವಿಸುತ್ತಾರೆ. ವಿರಾಟನ ಮನೆಯಲ್ಲಿ ಒಂದು ವರ್ಷ ಅಜ್ಞಾತವಾಸ ಕಳೆದಿದ್ದರಿಂದ ವಿರಾಟ ರಾಜ ತನ್ನ ಮಗಳನ್ನು ಅರ್ಜುನನ ಮಗ ಅಭಿಮನ್ಯುವಿಗೆ ಮದುವೆ ಮಾಡಿಕೊಡುತ್ತಾನೆ. ನಂತರ ಪಾಂಡವರು ತಮ್ಮ ಪ್ರತಿಜ್ಞೆಯಂತೆ ವನವಾಸ ಮುಗಿಸಿ ಬಂದಿರುವುದಾಗಿ ದುರ್ಯೋಧನನಿಗೆ ತಮ್ಮ ರಾಜವನ್ನು ಮರಳಿ ಕೊಡಲು ಕೇಳುತ್ತಾರೆ. ಆದರೆ ದುರ್ಯೋಧನ ಈ ಪ್ರಸ್ತಾವವನ್ನು ಖಡಾಖಂಡಿತವಾಗಿ ನಿರಾಕರಿಸುತ್ತಾನೆ. ಆಗ ಪಾಂಡವರು ಯುದ್ಧಕ್ಕೆ ಸನ್ನದ್ಧರಾಗುತ್ತಾರೆ.

 ಕುರುಕ್ಷೇತ್ರ ಪ್ರಮುಖ 25 ಕಲಾವಿದರು ಮತ್ತು ಅವರ ಪಾತ್ರಗಳು

ಆದರೆ ಯುದ್ಧದಿಂದ ಸಂಭವಿಸುವ ಅಪಾರ ಸಾವು-ನೋವು ಗಳನ್ನು ಪರಿಗಣಿಸಿ ಹಿರಿಯ ಪಾಂಡವ ಧರ್ಮರಾಯ ಯುಧಿಷ್ಠಿರ ಕೃಷ್ಣನನ್ನು ಹಸ್ತಿನಾವತಿಗೆ ಧುರ್ಯೋಧನನ ಜೊತೆ ಸಂಧಿಗೆ ಕಳಿಸುತ್ತಾನೆ. ಕೃಷ್ಣ ಸಂಧಾನಕ್ಕಾಗಿ ಹಸ್ತಿನಾವತಿಗೆ ಹೋಗಿ ಪಾಂಡವರಿಗೆ ಕೊನೆಯ ಪಕ್ಷ ಐದು ಊರುಗಳನ್ನಾದರೂ ನೀಡುಲು ಹೇಳುತ್ತಾನೆ. ಆದರೆ ಧುರ್ಯೋಧನ ಒಂದು ಸೂಜಿ ಮೊನೆಯಷ್ಟು ಜಾಗ ಕೊಡುವುದಿಲ್ಲ ಎಂದು ಹೇಳಿ ಕೃಷ್ಣನನ್ನೇ ಬಂಧಿಸಲು ಹೋಗುತ್ತಾನೆ. ಆಗ ಕೃಷ್ಣ ತನ್ನ ವಿಶ್ಷರೂಪ ತೋರಿ, ಮುಂಬರುವ ಯುದ್ಧದಲ್ಲಿ ಕೌರವರ ವಿನಾಶ ನಿಶ್ಚಿತವೆಂದು ಎಚ್ಚರಿಸಿ ಬರುತ್ತಾನೆ. ಹೀಗೆ ಯುದ್ಧ ಅನಿವಾರ್ಯವಾಗುತ್ತದೆ. ಪಾಂಡವ-ಕೌರವ ಸೇನೆಗಳು ತೀರ್ಥಕ್ಷೇತ್ರವಾದ ಕುರುಕ್ಷೇತ್ರದಲ್ಲಿ ಯುದ್ಧಕ್ಕಾಗಿ ಸೇರುತ್ತವೆ.

 

ಕುರುಕ್ಷೇತ್ರ-

1.ಭೀಷ್ಮ (ಅಂಬರೀಶ್)- ಮೊದಲ 1೦ ದಿನಗಳ ಕಾಲ ಕೌರವರ ಸೇನಾಧಿಪತಿಯಾಗಿ ಪಾಂಡವರಿಗೆ ತುಂಬಾ ಆಘಾತ ನೀಡಿದ ಬೀಷ್ಮನನ್ನು 10 ನೇ ದಿನ ಅರ್ಜುನ ಶಿಖಂಡಿಯ ಮೂಲಕ ಶರಶಯ್ಯೆಯಲ್ಲಿ ಮಲಗಿಸುತ್ತಾನೆ. ಭೀಷ್ಮ ಇಚ್ಚಾಮರಣಿಯಾದ (ತನ್ನಿಚ್ಚೆಯಂತೆ ಮಾತ್ರ ಸಾವು) ಕಾರಣ ಅರ್ಜುನ ಶಿಖಂಡಿಯನ್ನು ತನ್ನ ರಥದ ಸಾರಥಿಯಾಗಿ ಬಳುಸುತ್ತಾನೆ. ಅಖಂಡ ಬ್ರಹ್ಮಚಾರಿಯಾದ ಭೀಷ್ಮ ಯಾವದೇ ಸ್ತ್ರೀ ಮುಂದೆ ಬಂದರೆ ಶಸ್ತ್ರ ತ್ಯಾಗ ಮಾಡುವುದಾಗಿ ಪ್ರತಿಜ್ಞೆ ಮಾಡಿರುತ್ತಾನೆ.

 

2.ದ್ರೋಣ -ಅಭಿಮನ್ಯು - ನಂತರ ದ್ರೋಣ ಕೌರವರ ಸೇನಾಧಿಪತಿಯಾಗುತ್ತಾನೆ. ಅರ್ಜುನನಿಲ್ಲದ ವೇಳೆಯಲ್ಲಿ ಚಕ್ರವ್ಯೂಹ ರಚಿಸಿ, ಪಾಂಡವರನ್ನು ಆತಂಕಕ್ಕೀಡು ಮಾಡುತ್ತಾನೆ. ಆಗ ಅಭಿಮನ್ಯು ಚಕ್ರವ್ಯೂಹ ಭೇದಿಸಿ ವೀರಾವೇಶದಿಂದ ಹೋರಾಡಿ ಕೊನೆಗೆ ಹೊರೆಗೆ ಬರುವ ದಾರಿ ತಿಳಿಯದೇ ವೀರ ಮರಣ ಹೊಂದುತ್ತಾನೆ. ಯುದ್ಧದ 15 ನೇ ದಿನ ದ್ರೋಣ ಕೂಡ ತನ್ನ ಮಗ ಅಶ್ವತ್ಥಾಮ ಮಡಿದನೆಂದು ತಿಳಿದು ಶಸ್ತ್ರ ತ್ಯಾಗ ಮಾಡಿದಾಗ, ಪಾಂಡವರ ದೃಷ್ಟದ್ಯುಮ್ನ ದ್ರೋಣಾಚಾರ್ಯರನ್ನು ಕೊಲ್ಲುತ್ತಾನೆ.

 

3. ಕರ್ಣ- ಯುದ್ಧದ 17 ನೇ ದಿನ ಕರ್ಣ ಕೂಡ ಹಲವು ಹಿಂದಿನ ಶಾಪಗಳಿಂದ ಮಹತ್ವದ ಅಸ್ತ್ರಗಳನ್ನು ಮರೆಯುತ್ತಾನೆ, ಹಾಗೆ ಒಂದು ಶಾಪದ ಕಾರಣ ಅವನ ರಥ ಕೂಡ ನೆಲದಲ್ಲಿ ಹೂತು ಹೋಗುತ್ತದೆ. ಅದನ್ನು ತೆಗೆಯಲು ಕೆಳಗೆ ಇಳಿದಾಗ ಅರ್ಜುನನ ಅಸ್ತ್ರದಿಂದ ಕರ್ಣ ಮಡಿಯುತ್ತಾನೆ. ನಂತರ 18 ನೇ ದಿನ, ಕೊನೆಯ ದಿನ ಶಲ್ಯ ಕೂಡ ಮಡಿಯುತ್ತಾನೆ.

 

 ಚಾಲೆಂಜಿಂಗ್ ಸ್ಟಾರ್ ದರ್ಶನರ 50 ಚಿತ್ರಗಳು

ಗದಾಯುದ್ಧ - ಭೀಮ-ದುರ್ಯೋಧನರ ಅಂತಿಮ ಕಾಳಗ

 

18 ನೇ ದಿನದಲ್ಲಿ ತನ್ನವರನ್ನೆಲ್ಲಾ ಕಳೆದುಕೊಂಡ ಕೌರವೇಂದ್ರ ಭೀಷ್ಮನ ಸಲಹೆಯಂತೆ ವೈಶಂಪಾಯನ ಸರೋವರದ ಅಡಿಯಲ್ಲಿ ಜಲಸ್ತಂಬನ ವಿದ್ಯೆಯಿಂದ ಕೂರುತ್ತಾನೆ. ಆದರೆ ಅದನ್ನು ಕಂಡುಹಿಡಿದ ಭೀಮ ಅವನನ್ನು ಅವಮಾನಿಸಿ ಯುದ್ಧಕ್ಕೆ ಬರುಲು ಹೇಳುತ್ತಾನೆ. ಕಡುಕೋಪದಿಂದ ಸರೋವರದಿಂದ ಹೊರಬಂದ ದುರ್ಯೋಧನ ತಾನು ಐವರು ಪಾಂಡವರೊಡನೆ ಏಕಕಾಲದಲ್ಲಿ ಯುದ್ಧ ಮಾಡಲು ಸಿದ್ಧ ಎಂದು ಹೇಳುತ್ತಾನೆ. ಆದರೆ ಧರ್ಮರಾಯ ಅವನು ಯಾರಾದರೂ ಒಬ್ಬ ಪಾಂಡವನ ಜೊತೆ ತನ್ನ ನೆಚ್ಚಿನ ಆಯುಧದಿಂದ ಯುದ್ದ ಮಾಡಬಹುದು ಎಂದಾಗ ದುರ್ಯೋಧನ ತಾನು ಭೀಮನ ಜೊತೆ ಗದಾಯುದ್ಧ ಮಾಡುವುದಾಗಿ ಹೇಳುತ್ತಾನೆ.

 

ಭೀಮ ಬಲದಲ್ಲಿ ಶಕ್ತಿವಂತನಾದರೂ, ಗದಾಯುದ್ಧದಲ್ಲಿ ದುರ್ಯೋಧನ ಭೀಮನಗಿಂತ ಪರಿಣಿತನಿರುತ್ತಾನೆ. ಯುಧ್ದ ಆರಂಭವಾದಾಗ ಒಂದು ಬಾರಿ ಭೀಮ ದುರ್ಯೋಧನನ ಗದಾ ಘಾತದಿಂದ ಮೂರ್ಛೆ ಬೀಳುತ್ತಾನೆ. ನಂತರ ಭೀಮ ದುರ್ಯೋಧನನಿಗೆ ಎಷ್ಟೇ ಶಕ್ತಿಯಿಂದ ಹೊಡೆದರೂ ದುರ್ಯೋಧನನಿಗೆ ಏನು ಆಗದಿರುವುದನ್ನು ಗಮನಿಸುತ್ತಾನೆ. ಹಿಂದಿನ ರಾತ್ರಿ ಗಾಂಧಾರಿ ತನ್ನ ತಪಶಕ್ತಿಯಿಂದ ದುರ್ಯೋಧನನಿಗೆ ವಜ್ರದೇಹ ಕರುಣಿಸಿರುತ್ತಾಳೆ. ಅವನ ತೊಡೆಯ ಬಾಗವೊಂದು ಬಿಟ್ಟು ದೇಹದ ಎಲ್ಲಾ ಅಂಗ ವಜ್ರದ ರೀತಿ ಅಭೇದ್ಯವಾಗಿರುತ್ತದೆ. ಕೃಷ್ಣ ಭೀಮನಿಗೆ ಸನ್ನೆ ಮಾಡಿ ದುರ್ಯೋಧನನ ತೊಡೆಗೆ ಹೊಡೆಯುವುಂತೆ ಹೇಳುತ್ತಾನೆ. ಆದರೆ ಗದಾಯುದ್ಧದಲ್ಲಿ ತೊಡೆಗೆ ಹೊಡೆಯುವಂತಿಲ್ಲ. ಮೊದಮೊದಲು ಭೀಮ ನಿರಾಕರಿಸಿದರೂ ನಂತರೆ ಅನಿವಾರ್ಯವಾಗಿ ದುರ್ಯೋಧನ ಮೇಲೆ ಹಾರಿದಾಗ ತೊಡೆಗೆ ಬಲವಾಗಿ ಹೊಡದಾಗ ಕೌರವೇಂದ್ರ ಅಂತಿಮವಾಗಿ ಧರೆಗೆ ಒರುಗುತ್ತಾನೆ. ಇದನ್ನು ರನ್ನ ತನ್ನ ಗದಾಯುದ್ಧದಲ್ಲಿ `ಕುಲಗಿರಿಯೇ ಕಡೆದು ಬೀಳುವಂತೆ ದುರ್ಯೋಧನ ನೆಲಕ್ಕೆ ಬಿದ್ದ ಎಂದು ವರ್ಣಿಸುತ್ತಾನೆ.ಕೌರವ ಕುಲದ ಗಿರಿ ಧುರ್ಯೋಧನ ಭೀಮನ ಗದಾಘಾತದಿಂದ ನೆಲಕ್ಕೆ ಉರುಳಿದ.

  ಕುರುಕ್ಷೇತ್ರ ಚಿತ್ರಕ್ಕೆ ನಿಮ್ಮ ರೇಟಿಂಗ್ ಇಲ್ಲಿ ನೀಡಿರಿ

ಹೀಗೆ ಕುರುಕ್ಷೇತ್ರದ ಅಂತ್ಯವಾಗುತ್ತದೆ. ಜೀವನದಲ್ಲಿ ಪಾಂಡವರ ವಿರುದ್ಧ ಹಲವಾರು ಅಧರ್ಮಗಳನ್ನು ಮಾಡಿದ ಕೌರವೇಶ್ವರ ಯುದ್ಧದ್ದಲ್ಲಿ ಧರ್ಮ ಪಾಲಿಸಲು ಹೋಗಿ ಪರಾಭವನಾದರೆ, ಜೀವನದುದ್ದಕ್ಕೂ ಧರ್ಮ ಕಾರ್ಯಗಳನ್ನು ಮಾಡಿದ ಪಾಂಡವರು ಯುದ್ಧದ ಕೆಲ ಸನ್ನಿವೇಶಗಳಲ್ಲಿ ಕಷ್ಣನ ಸಲಹೆಯಂತೆ ಅಕಾರ್ಯಗಳನ್ನು ಪಾಲಿಸಿ ವಿಜಯೀಭವರಾಗುತ್ತಾರೆ. ಕುರುಕ್ಷೇತ್ರದ ಮೂಲಕ ಕೃಷ್ಣ ಅನ್ಯಾಯದ ಮಾರ್ಗದಲ್ಲಿರುವವರ ಜೊತೆ ಯುದ್ಧ ಮಾಡುವಾಗ ನ್ಯಾಯವಾಗಿ ಯುದ್ಧಮಾಡುತ್ತೇನೆ ಎಂಬ ಕಟ್ಟು ಪಾಡುಗಳಿಗೆ ಬೀಳಬಾರದು ಎಂಬ ಕಿರು ಸಂದೇಶವನ್ನು ಕೂಡ ನೀಡುತ್ತಾನೆ.

 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+