KannadabredcrumbMoviesbredcrumbKurukshetra
  ಕುರುಕ್ಷೇತ್ರ

  ಕುರುಕ್ಷೇತ್ರ

  Release Date : 09 Aug 2019
  Director : ನಾಗಣ್ಣ
  4/5
  Critics Rating
  4.5/5
  Audience Review
  ಪರಿಚಯ- ಕನ್ನಡದ ಅತ್ಯಂತ ಅದ್ಧೂರಿ ಪೌರಾಣಿಕ ಚಿತ್ರವಾದ `ಕುರುಕ್ಷೇತ್ರ'ವನ್ನು ಶಾಸಕ ಮುನಿರತ್ನ ನಿರ್ಮಿಸಿದ್ದಾರೆ. ನಾಗಣ್ಣ ನಿರ್ದೇಶಿಸಿರುವ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ನಟಿಸಿದ್ದಾರೆ. ರೆಬೆಲ್ ಸ್ಟಾರ್ ಅಂಬರೀಶ್ `ಭೀಷ್ಮ'ನಾಗಿ, ರವಿಚಂದ್ರನ್ ಕ‍ಷ್ಣನಾಗಿ, ಅರ್ಜುನ ಸರ್ಜಾ ಕರ್ಣನಾಗಿ, ನಿಕಿಲ್ ಕುಮಾರಸ್ವಾಮಿ ಅಭಿಮನ್ಯುವಾಗಿ ನಟಿಸಿದ್ದಾರೆ. ಮೇಘನಾ ರಾಜ್ ಭಾನುಮತಿ ಪಾತ್ರದಲ್ಲಿ ಮತ್ತು ಖ್ಯಾತ ತಮಿಳು ನಟಿ ಸ್ನೇಹಾ ದ್ರೌಪದಿ ಪಾತ್ರದಲ್ಲಿ ನಟಿಸಿದ್ದಾರೆ. ಇದು ದರ್ಶನ್ ರ 50ನೇ ಚಿತ್ರ.

   

  ಹಿನ್ನಲೆ- ಚಿತ್ರದ ಕಥೆ ರನ್ನನ `ಗಧಾಯುದ್ಧ' ಕೃತಿ ಆಧಾರಿತವಾಗಿದೆ. ಮಹಾಭಾರತದಲ್ಲಿ ಪಾಂಡವರು ಕೌರವರ ಮೋಸದಿಂದ ರಾಜ್ಯ ಕಳೆದುಕೊಂಡು 12 ವರ್ಷ ವನವಾಸ ಮತ್ತು ಒಂದು ವರ್ಷ ಅಜ್ಞಾತ ವಾಸ...

  • ನಾಗಣ್ಣ
   Director
  • ಮುನಿರತ್ನ
   Producer
  • ವಿ ಹರಿಕೃಷ್ಣ
   Music Director
  • ವಿ ನಾಗೇಂದ್ರ ಪ್ರಸಾದ್
   Lyricst
  • ವಿಜಯ್ ಪ್ರಕಾಶ್
   Singer
  Music Director:
  • ಸಾಹೋರೆ ಸಾಹೋ
   3.4
  • ಎಲ್ಲಿರುವೆ ಹರಿಯೇ
   4.5
  • ಜುಮ್ಮ ಜುಮ್ಮ
   2.8
  • ಕನ್ನಡ ಫಿಲ್ಮಿಬೀಟ್ - ಮಹಾ ಕಾವ್ಯದ ಮಹಾ ದರ್ಶನ
   4/5
   ಮಹಾಭಾರತದ ಕಥೆ ಎಲ್ಲರಿಗೂ ತಿಳಿದಿದೆ. ಆದರೂ ಅದನ್ನು ಮತ್ತೆ ಮತ್ತೆ ನೋಡಿದರು ಬೇಸರ ಆಗುವುದಿಲ್ಲ. ಹೀಗಿರುವಾಗ, ಈ ಮಹಾ ಕಾವ್ಯವನ್ನು ಅದೆಷ್ಟು ಚೆನ್ನಾಗಿ ತೋರಿಸುತ್ತೇನೆ ಎನ್ನುವುದು ಬಹಳ ಮುಖ್ಯ. ಆ ವಿಚಾರದಲ್ಲಿ ನಿರ್ದೇಶಕ ನಾಗಣ್ಣ ಹಾಗೂ ನಿರ್ಮಾಪಕ ಮುನಿರತ್ನ ಇಬ್ಬರೂ ಗೆದ್ದಿದ್ದಾರೆ. ಅದ್ದೂರಿ ಸೆಟ್ ಗಳು, ಶ್ರೀಮಂತಿಕೆ ಚಿತ್ರದ ಸೌಂದರ್ಯ ಹೆಚ್ಚಿಸಿದೆ. ಪಾಂಡವ ಮತ್ತು ಕೌರವ ಸಾಮ್ರಾಜ್ಯವನ್ನು ತೆರೆ ಮೇಲೆ ನೋಡಲು ಸೊಗಸಾಗಿದೆ.

   ಕನ್ನಡದಲ್ಲಿ ಪೌರಾಣಿಕ ಸಿನಿಮಾ ಬಂದು ಎಷ್ಟೋ ಕಾಲ ಆಗಿದೆ. ಹಾಗಾಗಿ, ಒಂದು ಒಳ್ಳೆಯ ಅನುಭವ, ಸಿನಿಮಾ ನೋಡಿದ ಮೇಲೆ ಆಗುತ್ತದೆ. ಕೆಲವೊಂದು..
  • ವಿಜಯ ಕರ್ನಾಟಕ
   3.5/5
   ಪೌರಾಣಿಕ ಪಾತ್ರಗಳನ್ನು ಮಾಡುವುದು ಸುಲಭವಲ್ಲ. ಆ ಕಾಲ ಘಟ್ಟವನ್ನು ಹಿಡಿದಿಡುವುದು ಸುಲಭವಲ್ಲ. ಈ ಎಲ್ಲ ಎಲ್ಲೆಗಳನ್ನೂ ದಾಟಿಕೊಂಡು ತಮ್ಮ ಶಕ್ತಿಯನುಸಾರ ಸಿನಿಮಾ ಮಾಡಿದೆ ಇಡೀ ಚಿತ್ರತಂಡ. ಆಧುನಿಕ ಜನ ಜೀವನದ ಮಧ್ಯೆ ಕಳೆದು ಹೋಗಿರುವ ಪ್ರೇಕ್ಷಕರು, ಕುರುಕ್ಷೇತ್ರ ಚಿತ್ರದ ಮೂಲಕ ದ್ವಾಪರ ಯುಗಕ್ಕೊಮ್ಮೆ ಹೋಗಿ ಎಂಜಾಯ್‌ ಮಾಡಿಬರಬಹುದು.
  • ಪ್ರಜಾವಾಣಿ
   0/5
   ಇದು ದರ್ಶನ್ ಅವರ 50ನೇ ಸಿನಿಮಾ. ಇದರಿಂದ ಚಿತ್ರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ದುರ್ಯೋಧನನ ಪಾತ್ರದಲ್ಲಿ ಅವರು ತಮ್ಮ ನಿಲುವು, ಕಣ್ಣೋಟ, ಗತ್ತಿನಿಂದ ಮನ ಸೆಳೆಯುತ್ತಾರೆ. ಅವರ ಪ್ರಭಾವಳಿ ಮತ್ತು ವ್ಯಾಪಾರಿ ಸೂತ್ರ ಚೌಕಟ್ಟಿನಲ್ಲಿಯೇ ರೂಪುಗೊಂಡಿರುವ ಸಿನಿಮಾ ಇದು. ಹಾಗಾಗಿ ಪಾತ್ರದೊಳಗೆ ಅವರೆಷ್ಟು ಪರಕಾಯ ಪ್ರವೇಶ ಮಾಡಿದ್ದಾರೆಂಬ ಲೆಕ್ಕಾಚಾರ ಬದಿಗಿಟ್ಟು ಸಿನಿಮಾ ನೋಡುವುದು ಅನಿವಾರ್ಯ.
  • days ago
   Manju bkoppad
   Report
   ತುಂಬಾ ಚನ್ನಾಗಿ ಮೂಡಿ ಬಂದಿದೆ ಕುರುಕ್ಷೇತ್ರ. ಬರೀ ಡಿ ಬಾಸ್ ಅಭಿಮಾನಿಗಳು ಮಾತ್ರ ಅಲ್ಲ ಎಲ್ಲ ಕನ್ನಡಿಗರು ನೋಡುವಂತ ಚಿತ್ರ ಕೌರವರು ಯಾರು ಪಾಂಡವರು ಯಾರು ಕುರುಕ್ಷೇತ್ರ ಯುದ್ಧ ಯಾಕೆ ನೆಡೆಯುತು ಅಂತ ತುಂಬಾ ಸೊಗಸಾಗಿ ತೆರೆಮೇಲೆ ತಂದಿದಾರೆ. ಅದರಲ್ಲೂ ದರ್ಶನ್ ಬಾಸ್ ಸೂರ್ಯೋದನ ನ ಬಗ್ಗೆ ಎಷ್ಟು ಹೇಳಿದ್ರು ಕಮ್ಮಿನೇ. ಇನ್ನು ಶಕುನಿ ಮಾವ ಯಾಕೆ ಕುತಂತ್ರ ಮಾಡಿದ ಅನೊದ್ದು ತುಂಬಾ ಚನ್ನಾಗಿ ಮೂಡಿ ಬಂದಿದೆ ಕೊನೆಯದಾಗಿ ಎಲ್ಲಾರು ನಿಮ್ಮ ಕುಟುಂಬ ಸಮೇತ ಹೋಗಿ ಚಿತ್ರ ವೀಕ್ಷಣೆ ಮಾಡಿ ಜೈ ಡಿ ಬಾಸ್
  • days ago
   Anand Kumar C
   Report
   Really amazing movie D Boss action mind blowing
  • days ago
   ARJUN
   Report
   One word good 3d movie
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X