ಕುಷ್ಕ (2021)(U/A)
Release date
26 Feb 2021
genre
ಕುಷ್ಕ ಕಥೆ
ಯೋಗಾನಂದ ಮುದ್ದಾನ್ ನಿರ್ದೇಶನದಲ್ಲಿ ಮೂಡಿಬಂದಿರುವ `ಕುಷ್ಕ' ಚಿತ್ರದಲ್ಲಿ ಚಂದನ್ ಗೌಡ ಮತ್ತು ಸಂಜನಾ ಆನಂದ್ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಗುರುಪ್ರಸಾದ್, ಶೋಭರಾಜ್ ಮತ್ತು ಕೈಲಾಶ್ ಪಾಲ್ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.ಅಭಿಲಾಷ ಗುಪ್ತ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದ `ಸಿಂಪಲ್ ಸಲುಗೆ' ಹಾಡು ವಿಜಯ್ ಪ್ರಕಾಶ್ ಮತ್ತು ಸಾನ್ವಿ ಶೆಟ್ಟಿ ಧ್ವನಿಯಲ್ಲಿ ಮೂಡಿಬಂದಿದ್ದು ಯ್ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮನಗೆದ್ದಿದೆ. ಚಿತ್ರದ ಎಲ್ಲ ಗೀತೆಗಳನ್ನು ರಾಮಕೃಷ್ಣ ರಾಣಗಟ್ಟಿ ಬರೆದಿದ್ದಾರೆ.
ಬೇಗನೇ ಶ್ರೀಮಂತರಾಗಲು ಸ್ಕೀಮ್ ಮಾಡುವ ಸಸ್ಪೆಂಡ್ ಆದ ಪೋಲಿಸ್ ಮತ್ತು ಮೆಕಾನಿಕ್. ಒಂದು ಅಮೂಲ್ಯ ರತ್ನದ ಶೋಧನೆಯಲ್ಲಿರುವ ಡ್ರಗ್ ಡೀಲರ್ ಮತ್ತು ಗ್ಯಾಂಗಸ್ಟರ್ ಗುಂಪುಗಳು. ಕಷ್ಟಗಳ ಮಧ್ಯದಲ್ಲಿರುವ ತನ್ನ ಪ್ರಿಯತಮನನ್ನು ಬೆಂಬತ್ತುವ ಪ್ರೇಯಸಿ. ಹೀಗೆ ಎಲ್ಲರ ಜೀವನ ಒಂದು ಹಂತದಲ್ಲಿ ಘರ್ಷಣೆ ಒಳಗಾದಾಗ ಸಿಗುವ ಮಿಶ್ರಣವೇ ಕುಷ್ಕ.
**Note:Hey! Would you like to share the story of the movie ಕುಷ್ಕ with us? Please send it to us ([email protected]).