ಲೈನ್‌ಮ್ಯಾನ್ ಸಿನಿಮಾವನ್ನು
ರಘು ಶಾಸ್ತ್ರಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ತ್ರಿಗುಣ್ ನಾಯಕನಾಗಿ ಹಾಗೂ
ಕಾಜಲ್ ಕುಂದರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಬಿ ಜಯಶ್ರೀ, ಮೈಕೋ ನಾಗರಾಜ್, ಹರಿಣಿ, ಅಂಜಲಿ, ಅಪೂರ್ವಶ್ರೀ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ.
ಮಣಿಕಾಂತ್ ಕದ್ರಿ ಸಂಗೀತ ಹಾಗೂ ಶಾಂತಿ ಸಾಗರ್ ಹೆಚ್.ಜಿ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನು ಪರ್ಪಲ್ ರಾಕ್ ಬ್ಯಾನರ್ ಅಡಿಯಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ನಿರ್ಮಿಸಿದ್ದಾರೆ.
ವಿದ್ಯುತ್ ಸಂಬಂಧಿತ ಕೆಲಸ ಹಾಗೂ ತೊಂದರೆ ಸರಿಪಡಿಸುವ ಲೈನ್‌ಮ್ಯಾನ್ ಸುತ್ತ ಈ ಸಿನಿಮಾದ ಕಥೆ ಸುತ್ತುತ್ತದೆ. ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.
ಬಿಡುಗಡೆ: ಲೈನ್‌ಮ್ಯಾನ್ ಸಿನಿಮಾ 2024, ಮಾರ್ಚ್ 22ರಂದು ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಬಿಡುಗಡೆ ಆಗಲಿದೆ.