twitter

    ಲೋಫರ್ಸ್ ಕಥೆ

    ಶಂಕರ್ ಮೋಹನ್ ನಿರ್ದೇಶನ ಮಾಡಿರುವ ಲೋಫರ್ಸ ಚಿತ್ರವನ್ನು ಬಿ ಎನ್ ಗಂಗಾಧರ್ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಅರ್ಜುನ ಆರ್ಯ, ಚೇತನ್ ಸೂರ್ಯ, ಮನೋಹರ್ ಜೆ, ಶ್ರಾವ್ಯ ಗಣಪತಿ, ಸುಷ್ಮಾ ರಾಜ್ ಮತ್ತು ಸಾಕ್ಷಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಸಂತೋಷದ ಬೆನ್ನತ್ತಿ ಹೋಗುವ ಒಂದು ಯುವ ಪ್ರೇಮಿಗಳ ಗುಂಪು ಸರಿಯಾದ ದಾರಿ ಬಿಟ್ಟು ತಪ್ಪು ದಾರಿ ತುಳಿಯುತ್ತಾರೆ. ತಮ್ಮ ದಾರಿ ತಪ್ಪೆಂದು ಅವರಿಗೆ ಅರಿವಾಗುತ್ತದೆಯಾ? ಎನ್ನುವುದು ಚಿತ್ರದ ಕಥೆ.


    ಏಳು ಜನ ಸ್ನೇಹಿತರು ಜೀವನದಲ್ಲಿ ಬಿಂದಾಸ್ ಆಗಿ ಇರಲು ಹೇಗಾದರೂ ಮಾಡಿ ಹಣ ಸಂಪಾದಿಸಿಬೇಕೆಂದು ಅಕ್ರಮ ಮಾರ್ಗ ತುಳಿಯುತ್ತಾರೆ. ಹಲವು ಕಷ್ಟಗಳ ಮಧ್ಯೆ ಇವರ ಸ್ನೇಹ ಇನ್ನಷ್ಟು ಬಲವಾಗುತ್ತ ಹೋಗುತ್ತದೆ. ಇವರು ಒಂದು ಸಲ ವೀಕೆಂಡ್ ನಲ್ಲಿ ಲಾಂಗ್ ಡ್ರೈವ್‌ ಹೋಗಲು ನಿರ್ಧರಿಸುತ್ತಾರೆ. ಆದರೆ ಕುಡಿದ ಮತ್ತಿನಲ್ಲಿ ಅಜಯ್ ತನ್ನ ಸ್ನೇಹಿತರಿಲ್ಲದೇ ತಾನೋಬ್ಬನೇ ಲಾಂಗ್ ಡ್ರೈವ್ ಹೋಗುತ್ತಾನೆ. ನಡುವೆ ವಾಹನ ಕೆಟ್ಟಾಗ, ಅಲ್ಲಿಯೇ ಬಳಿಯಿರುವ ಒಂದು ನಿರ್ಜನ ಮನೆಯಲ್ಲಿ ಆಶ್ರಯ ಪಡೆಯುತ್ತಾನೆ. ಅಲ್ಲಿ ಅಜಯ್ ಗೆ ಹಲವು ವಿಚಿತ್ರ ಅನುಭವಗಳಾಗುತ್ತವೆ. ಇದರ ಮರ್ಮವೇನೇಂದು ತಿಳಿಯಲು ಅಜಯ್ ತನ್ನ ಸ್ನೇಹಿತರನ್ನು ಕರೆದುಕೊಂಡು ಅಲ್ಲಿಯೇ ಠಿಕಾಣಿ ಹೂಡುತ್ತಾನೆ. ಆ ಮನೆಯ ಕಥೆಯೇನು ? ಇವರು ಅಲ್ಲಿಯ ಭಯಾನಕ ಘಟನೆಗಳ ಮರ್ಮವನ್ನು ಭೇದಿಸುತ್ತಾರಾ ಎಂಬುದು ಚಿತ್ರದ ಉಳಿದ ಕಥೆ. 

    **Note:Hey! Would you like to share the story of the movie ಲೋಫರ್ಸ್ with us? Please send it to us ([email protected]).
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X