ಡಾರ್ಲಿಂಗ್ ಕೃಷ್ಣ
ನಿರ್ದೇಶಿಸಿ ಮುಖ್ಯ ಪಾತ್ರದಲ್ಲಿ ನಟಿಸಿ
ದ್ದ, ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದಿದ್ದ ಲವ್ ಮಾಕಟೇಲ್ ಚಿತ್ರದ ಎರಡನೇ ಭಾಗವಾಗಿ ಈ ಚಿತ್ರ ಮೂಡಿ
ಬಂದಿದೆ.
ಮೊದಲ ಭಾಗದಲ್ಲಿ ನಾಯಕಿಯಾಗಿದ್ದ ಮಿಲನಾ ನಾಗರಾಜ್ ಹಿಂದಿನ ಚಿತ್ರದಂತೆ ಈ ಚಿತ್ರದ ನಿರ್ಮಾಣ ಮಾಡಿದ್ದಾರೆ. ಶ್ರೀ ಕ್ರೇಜಿಮೈಂಡ್ಸ್ ಚಿತ್ರದ ಛಾಯಾಗ್ರಹಣ ಮತ್ತು ಸಂಕಲನ ಮಾ
ಡಿದ್ದಾರೆ. ನಕುಲ್ ಅಭಯಂಕರ್ ಚಿತ್ರಕ್ಕೆ ಸಂಗೀತ ನೀ
ಡಿದ್ದಾರೆ.
ನಾಯಕಿರಾಗಿ ರೇಚೆಲ್ ಡೇವಿಡ್, ಸುಶ್ಮಿತಾ ಗೌಡ, ಅಮೃತಾ ಅಯ್ಯಂಗಾರ್ ಮತ್ತು ರಚನಾ ನಟಿಸಿದ್ದಾರೆ. ಹಾಗೇ ಕೆಲ ಫ್ಲ್ಯಾಶಬ್ಯಾಕ್ ಸನ್ನಿವೇಶಗಳಲ್ಲಿ ಮಿಲನಾ ನಾಗರಾಜ್ ಕಾಣಿಸಿಕೊಂಡಿದ್ದಾರೆ.
ಕಥೆ: ಒಂದನೇ ಚಿತ್ರ ನಿಧಿಯ ವಿಷಾದಕರ ನಿಧನದಲ್ಲಿ ಮುಕ್ತಾಯವಾಗುತ್ತದೆ. ಈ ಚಿತ್ರದಲ್ಲಿ ನಿಧಿಯ ನೆನಪುಗಳ ದೋಣಿಯಲ್ಲಿ ಸಾಗುತ್ತಿರುವ ಆದಿಯ ಮುಂದಿನ ಜೀವನದ ಚಿತ್ರವಿದೆ.