ರೋರಿಂಗ್ ಸ್ಟಾರ್ ಶ್ರೀಮುರಳಿ ನಾಯಕನಾಗಿ ಅಭಿನಯಿಸುತ್ತಿರುವ `ಮದಗಜ' ಸಾಹಸಪ್ರಧಾನ ಚಿತ್ರವಾಗಿದ್ದು `ಅಯೋಗ್ಯ' ಖ್ಯಾತಿಯ ನಿರ್ದೇಶಕ ಮಹೇಶಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಆಶಿಕಾ ರಂಗನಾಥ್ ನಾಯಕಿಯಾಗಿರುವ ಈ ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಜಗಪತಿ ಬಾಬು, ಪ್ರಕಾಶ್ ರಾಜ್, ದೇವಯಾನಿ, ರಾಮಚಂದ್ರ ಬಾಬು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ: ಎರಡು ಊರಿನ ನಡುವೆ ದ್ವೇಷ, ಒಂದೂರಿನಲ್ಲಿ ಬರೀ ವಿಲ್ಲನ್ನುಗಳು, ಕೊಚ್ಚುವುದೊಂದೇ ಅವರ ಕೆಲಸ. ಇನ್ನೊಂದು ಊರಿನಲ್ಲಿ 'ಹೀರೋ'ಗಳು ಅವರದ್ದೂ ಕೊಚ್ಚುವುದೇ ಕೆಲಸ. ಅಪ್ಪ ಊರ ಜನರನ್ನು ದುಷ್ಟರಿಂದ ಕಾಯುವ ದೊರೆ, ಮಗ ಯುವರಾಜ. ವಯಸ್ಸಾದ ಅಪ್ಪನ ಜಾಗ ತುಂಬುವ ಮಗನ ಹೆಗಲಿಗೆ ಊರ ಜನರನ್ನು ಕಾಪಾಡುವ ಜವಾಬ್ದಾರಿ. ಮಗ ಹೇಗೆ ಈ ಜವಾಬ್ದಾರಿಯನ್ನು ನಿರ್ವಹಿಸುತ್ತಾನೆ ಎಂಬುದು ಚಿತ್ರದ ಕಥೆ.
ಚಿತ್ರದ ಫಸ್ಟ್ ಲುಕ್ 2018,ಡಿಸೆಂಬರ್ 17 ರಂದು ಶ್ರೀಮುರಳಿ ಜನ್ಮದಿನ ಪ್ರಯುಕ್ತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆ ಮಾಡಿದರು.ಚಿತ್ರದಲ್ಲಿ ಶ್ರೀಮುರಳಿ NRI ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಆಶಿಕಾ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ.