ಡಿ ಸತ್ಯಪ್ರಕಾಶ್ ನಿರ್ದೇಶನದಲ್ಲಿ ಮೂಡಿಬಂದಿರುವ ಮ್ಯಾನ್ ಆಫ್ ದಿ ಮ್ಯಾಚ್ ಚಿತ್ರವನ್ನು ಅಶ್ವಿನಿ ಪುನೀತ್ ರಾಜಕುಮಾರ್ ರವರು `ಪಿ.ಆರ್.ಕೆ ಪ್ರೊಡಕ್ಷನ್ಸ್' ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ನಟರಾಜ್ ಎಸ್ ಭಟ್, ಧರ್ಮಣ್ಣ ಕಡೂರು, ವಾಸುಕಿ ವೈಭವ್, ವೀಣಾ ಸುಂದರ್ ಮುಂತಾದ ಕಲಾವಿದರ ದಂಡೇ ಇದೆ. ಇದೊಂದು ಪ್ರಯೋಗಾತ್ಮಕ ಚಿತ್ರವಾಗಿದೆ.
ಕಥೆ: ಒಬ್ಬ ನಿರ್ದೇಶಕ ಚಿತ್ರದ ಅಡಿಷನ್ ಗಾಗಿ ಕಲಾವಿದರನ್ನು ಕರೆಯುತ್ತಾನೆ. ಅಲ್ಲಿಗೆ ಅಡಿಷನ್ ಗೆ ಬಂದ ಕಲಾವಿದರ ಮಧ್ಯೆ ವಿರಸ ಉಂಟು ಮಾಡಿ, ಮುಂದೆ ನೆಡೆಯುವ ಘಟನೆಗಳನ್ನೇ ಚಲನಚಿತ್ರವನ್ನಾಗಿ ಮಾಡುತ್ತಾನೆ.
ಆಡಿಷನ್ ಗೆ ಬರುವ ಯುವಕರದ್ದು ಒಂದೊಂದು ಭಿನ್ನ ಕಥೆ. ಆದರೆ, ಅವರೆಲ್ಲರ ಗುರಿ ಮಾತ್ರ ಅಭಿನಯಿಸುವುದು. ಇದನ್ನೇ ಬಂಡವಾಳವಾಗಿ ಇಟ್ಟುಕೊಂಡ ನಿರ್ದೇಶಕ ಅವರ ಮಧ್ಯೆ ನೆಡೆಯುವ ಸಂಭಾಷಣೆಗಳನ್ನು ಚಿತ್ರೀಕರಿಸಿ ಸಿನಿಮಾ ಮಾಡುತ್ತಾರೆ.