'ಮಾರ್ಟಿನ್' ಸಿನಿಮಾ ಎ.ಪಿ.ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾ ಅವರ 6ನೇ ಸಿನಿಮಾ ಇದಾಗಿದ್ದು, ವೈಭವಿ ಶಾಂಡಿಲ್ಯ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಚಿಕ್ಕಣ್ಣ, ಮಾಳವಿಕಾ ಅವಿನಾಶ್, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ಸಾಧು ಕೋಕಿಲ, ಅನ್ವೇಷಿ ಜೈನ್, ನವಾಬ್ ಶಾ, ರೋಹಿತ್ ಪಠಾಕ್ ಸೇರಿದಂತೆ ಹಲವಾರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರಕ್ಕೆ ಮಣಿ ಶರ್ಮಾ ಹಾಗೂ ರವಿ ಬಸ್ರೂರು ಸಂಗೀತ, ವಸಂತ ಹೆಗಡೆ ಛಾಯಾಗ್ರಹಣವಿದೆ. ವಾಸವಿ ಎಂಟರ್ ಪ್ರೈಸಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ ಈ ಸಿನಿಮಾಗೆ ಉದಯ್ ಕೆ ಮೆಹತಾ ಬಂಡವಾಳ ಹೂಡಿದ್ದಾರೆ. ಮಾರ್ಟಿನ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ಕನ್ನಡ, ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಸೇರಿ 5 ಭಾಷೆಗಳಲ್ಲಿ ಬಿಡುಗಡೆ ಆಯಿತು.
ಕಥೆ: ಹತ್ತು ಆನೆಯ ಶಕ್ತಿಯನ್ನೊಂದಿರುವ ವ್ಯಕ್ತಿ ಪಾಕಿಸ್ತಾನದ ನೆಲದಲ್ಲಿ ತನ್ನ ಪರಾಕ್ರಮವನ್ನು ತೋರಿಸುತ್ತಾನೆ. ಇಂಡಿಯನ್ ಎಂಬ ಟ್ಯಾಟೂ ಹಾಕಿಸಿಕೊಂಡ ವ್ಯಕ್ತಿ ಅಲ್ಲಿದ್ದ ಎಲ್ಲರನ್ನೂ ಮಣ್ಣು ಮುಕ್ಕಿಸುತ್ತಾನೆ. ಆ ನಂತರ ಭಾರತಕ್ಕೆ ಪರಾರಿ ಕೂಡ ಆಗುತ್ತಾನೆ. ಆದರೆ, ದುರಾದೃಷ್ಟವಶಾತ್.. ಈ ವ್ಯಕ್ತಿಗೆ ತನ್ನ ಹಿನ್ನೆಲೆ ಗೊತ್ತಿರಲ್ಲ. ತಾನ್ಯಾರು ಎನ್ನುವ ಅರಿವು ಇರಲ್ಲ. ಈ ಕಾರಣಕ್ಕೆ ಹತಾಶೆಗೊಳಗಾಗುವ ಈ ವ್ಯಕ್ತಿ ತನ್ನ ಅಸ್ತಿತ್ವವನ್ನು ಹುಡುಕಲು ಶುರುಮಾಡುತ್ತಾನೆ. ಈ ಪ್ರಯಾಣದಲ್ಲಿ ಕಾಳಸಂತೆಯ ಅರಿವು ಆಗುತ್ತೆ. ಭಾರತದ ಮೇಲೆ ದಾಳಿಯನ್ನು ಮಾಡಲು ಭಯೋತ್ಪಾದಕರು ಸರ್ವ ಸನ್ನದ್ದರಾಗಿದ್ದಾರೆ ಎಂಬ ವಿಚಾರ ಕೂಡ ಈ ಬಲಶಾಲಿಗೆ ಗೊತ್ತಾಗುತ್ತೆ. ಮುಂದೇನಾಗುತ್ತೆ ಎಂಬದೇ ಸಿನಿಮಾ ಕಥೆ.
ಬಿಡುಗಡೆ: 'ಮಾರ್ಟಿನ್' ಸಿನಿಮಾ 2024ರ ಅಕ್ಟೋಬರ್ 11ರಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಯಿತು.
ಒಟಿಟಿ: ಮಾರ್ಟಿನ್ ಸಿನಿಮಾ 2024ರ ನವೆಂಬರ್ 19ರಂದು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಯಿತು.