2006ರಲ್ಲಿ ತೆರೆ ಕಂಡ ಜಗ್ಗೇಶ್ ಅಭಿನಯದ 'ಮಠ' ಸಿನಿಮಾ ಬಗ್ಗೆ ಎಲ್ಲರಿಗೂ ಗೊತ್ತಿದೆ. ಈ ಸಿನಿಮಾವನ್ನು ಆರ್. ಶ್ರೀನಿವಾಸ್ ನಿರ್ಮಿಸಿ ಗುರುಪ್ರಸಾದ್ ನಿರ್ದೇಶಿಸಿದ್ದರು. ಈ ಸಿನಿಮಾದಲ್ಲಿ ಜಗ್ಗೇಶ್ ಜೊತೆಗೆ ಸುದರ್ಶನ್, ತಬಲಾ ನಾಣಿ, ವೈಜಯಂತ್ ಬಿರಾದಾರ್, ಮಂಡ್ಯ ರಮೇಶ್ ನಟಿಸಿದ್ದರು. ಇದೀಗ ಇದೇ ಹೆಸರಿನಲ್ಲಿ ಮತ್ತೊಂದು ಹೊಸ ಸಿನಿಮಾ ತಯಾರಾಗಿದೆ.
ರವೀಂದ್ರ ವಂಶಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಮಠ' ಸಿನಿಮಾದಲ್ಲಿ ಮಂಡ್ಯ ರಮೇಶ್, ಗುರುಪ್ರಸಾದ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಕರ್ನಾಟಕದಲ್ಲಿರುವ ಮಠಗಳ ಬಗ್ಗೆ ಹಾಗೂ ಅಲ್ಲಿ ನಡೆದಂತ ನೈಜ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ನಿರ್ದೇಶಕ ರವೀಂದ್ರ ವೆಂಶಿ ಚಿತ್ರಕಥೆ ಹೆಣೆದು ನಿರ್ದೇಶನ ಮಾಡಿದ್ದಾರೆ. ರವೀಂದ್ರ ವೆಂಶಿ ಪುಟಾಣಿ ಸಫಾರಿ, ವರ್ಣಮಯ, ವಾಸಂತಿ ನಲಿದಾಗ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದು, ಈ ಬಾರಿ 'ಮಠ' ಎಂಬ ಡಿಫ್ರೆಂಟ್ ಕಥಾವಸ್ತುವನ್ನು ಕೈಗೆತ್ತಿಕೊಂಡಿದ್ದಾರೆ.