ಭಾರ್ಗವ ನಿರ್ದೇಶನದ `ಮತ್ತೆ ಹಾಡಿತು ಕೋಗಿಲೆ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್, ಅನಂತನಾಗ್, ಭವ್ಯ ಮತ್ತು ರೂಪಿಣಿ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದ ಮೂಲಕ ಬೇಬಿ ಶ್ಯಾಮಿಲಿ ಕನ್ನಡ ಸಿನಿರಂಗ ಪ್ರವೇಶಿಸಿದರು.
ಚಿತ್ರದ ಕಥೆ ಮತ್ತು ಗೀತೆಗಳನ್ನು ಚಿ.ಉದಯಶಂಕರ್ ಬರೆದಿದ್ದರು. ರಾಜನ್ ನಾಗೇಂದ್ರ ಸಂಗೀತದಲ್ಲಿ ಮೂಡಿಬಂದ ಗೀತೆಗಳಿಗೆ ಎಸ್.ಪಿ.ಬಾಲಸುಪ್ರಬ್ರಹ್ಮಣ್ಯಂ, ಎಸ್ ಜಾನಕಿ ಮತ್ತು ಕೆ.ಎಸ್.ಚೈತ್ರಾ ಧ್ವನಿಯಾಗಿದ್ದರು.