ಭರತ್ ಎಸ್ ನಾವುಂದ ನಿರ್ದೇಶನದಲ್ಲಿ ಮೂಡಿ ಬಂದಿರುವ ಮುಗಿಲ್ ಪೇಟೆ ಚಿತ್ರದಲ್ಲಿ ಮನೋರಂಜನ್ ರವಿಚಂದ್ರನ್ ಮತ್ತು ಕಯಾದು ಲೋಹರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ವಿಜಯ್ ಕುಮಾರ್ ಮತ್ತು ರಕ್ಷಾ ಬಂಡವಾಳ ಹೂಡಿದ್ದಾರೆ. ಸಂಭ್ರಮ ಶ್ರೀಧರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಕಥೆ: ಈ ಸಿನಿಮಾದಲ್ಲಿ ಮನೋರಂಜನ್ ಪಾತ್ರದ ಹೆಸರು ರಾಜ. ಈ ರಾಜನ ಬದುಕಿನಲ್ಲಿ ಅಪ್ಪ, ಅಮ್ಮ, ಪ್ರೀತಿ, ಪ್ರೇಮ ಸ್ನೇಹಿತರು ಹೀಗೆ ಸಾಮಾನ್ಯವಾಗಿ ಎಲ್ಲರ ಬದುಕಿನಲ್ಲಿ ಬರುವಂತಹ ಸಹಜ ಪಾತ್ರಗಳು ಬರುತ್ತವೆ. ಈ ಪಾತ್ರಗಳು ರಾಜನ ಜೀವನದಲ್ಲಿ ಹಲವು ತಿರುವುಗಳನ್ನ ನೀಡುತ್ತವೆ. ರಾಜನ ಜೀವನಕ್ಕೆ ಯಾವ ಯಾವ ಪಾತ್ರಗಳು ಯಾವ ರೀತಿ ವ್ಯಥೆಯನ್ನು ಕೊಡುತ್ತವೆ. ಎಲ್ಲಾ ಜಂಜಾಟಗಳ ನಡುವೆ, ಅವರೆಲ್ಲರ ಮನಸ್ಸು ಗೆದ್ದು, ಮೆಚ್ಚಿನ ರಾಜನಾಗಿ ನಾಯಕ ಹೇಗೆ ಗೆಲ್ಲುತ್ತಾನೆ ಎನ್ನುವುದೇ ಸಿನಿಮಾ.