ಕೋಮಲ್ ಅಭಿನಯದ ನಮೋ ಭೂತಾತ್ಮ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದ್ದ ನೃತ್ಯ ಸಂಯೋಜಕ ಮುರಳಿ ಅವರು ಇದೀಗ ನಮೋ ಭೂತಾತ್ಮಕ 2 ಚಿತ್ರ ನಿರ್ದೆಶಿಸಿದ್ದಾರೆ. ಇದೊಂದು ಹಾರರ್ ಕಾಮಿಡಿ ಸಿನಿಮಾವಾಗಿದ್ದು, ನಮೋ ಭೂತಾತ್ಮ ಚಿತ್ರ ಮುಂದುವರೆದ ಭಾಗ. ಚಿತ್ರದಲ್ಲಿ ಕೋಮಲ್ ನಾಯಕನಾಗಿ ನಟಿಸಿದ್ದು, ಲೇಖಾಚಂದ್ರ ನಾಯಕಿ. ಉಳಿದಂತೆ ಮಿಮಿಕ್ರಿ ಗೋಪಿ, ಮಹಾಂತೇಶ್, ಗೋವಿಂದೇಗೌಡ, ರುದ್ರೇಶ್, ಮೋನಿಕಾ ಸೇರಿದಂತೆ ಹಲವರು ಫೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅರುಣ್ ಆಂಡ್ರ್ಯೂಸ್ ಸಂಗೀತ ಸಂಯೋಜಿಸಿದ್ದು, ಹಾಲೇಶ್ ಎಸ್ ಛಾಯಾಗ್ರಹಣ ಮಾಡಿದ್ದಾರೆ.
ಬಿಡುಗಡೆ: ನಮೋ ಭೂತಾತ್ಮ 2 ಸಿನಿಮಾ ಆಗಸ್ಟ್ 4ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.