ನಾರಾಯಣ ನಾರಾಯಣ ಸಿನಿಮಾವನ್ನು ಶ್ರೀಕಾಂತ್ ಕೆಂಚಪ್ಪ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಮಜಾ ಟಾಕೀಸ್ ಖ್ಯಾತಿ ಪವನ್ ಕುಮಾರ್ ಕೃಷ್ಣನಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ದರ್ಶನ್ ಸೂರ್ಯ, ಕೀರ್ತಿ ಕೃಷ್ಣ, ಪುನೀತ್ ಬಿಎ, ಗುರುರಾಜ್ ಬಸವರಾಜ್, ಹಂಪಕುಮಾರ್, ಭೂಮಿಕಾ ರಾವ್ ಮುಂತಾದವರು ತಾರಾಗಣದಲ್ಲಿದ್ದಾರೆ. ಸತ್ಯ ರಾಧಾ ಕೃಷ್ಣ ಮತ್ತು ಜತಿನ್ ದರ್ಶನ್ ಸಂಗೀತ, ಕಮಲ್ ಸಿಂಗ್ & ಲಕ್ಕೆ ಗೌಡ ಛಾಯಾಗ್ರಹಣ ಹಾಗೂ ಅರವಿಂದ್ ರಾಜ್ ಸಂಕಲನ ಸಿನಿಮಾಗಿದೆ. ಕೃಷ್ಣಪ್ಪ ಪಿ ಮತ್ತು ಮಂಜುನಾಥ್ ಕೆ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.