ದ್ವಾರಕೀಶ್ ನಿರ್ದೇಶನದ ನೀ ಬರೆದ ಕಾದಂಬರಿ ಚಿತ್ರದಲ್ಲಿ ವಿಷ್ಣುವರ್ಧನ್ ಛಾಯಾಗ್ರಾಹಕನ ಪಾತ್ರದಲ್ಲಿ ಮಿಂಚಿದರು. ನಾಯಕಿಯಾಗಿ ಭವ್ಯ ನಟಿಸಿದ್ದರೆ, ಸಿ.ಅರ್.ಸಿಂಹ, ಹೇಮಾ ಚೌಧರಿ ಪೋಷಕ ಪಾತ್ರದಲ್ಲಿ ನಟಿಸಿದರು.
ತಂದೆಯ ವಿರುದ್ಧವಾಗಿ ಛಾಯಾಗ್ರಾಹಕನನ್ನು ಮದುವೆಯಾಗುವ ಶ್ರೀಮಂತನ ಮಗಳು ನಂತರ ಭಿನ್ನಾಭಿಪ್ರಾಯಗಳಿಂದ ಪತಿಯಿಂದ ದೂರವಾಗುತ್ತಾಳೆ.ನಂತರ ಅವರ ದಾಂಪತ್ಯ ಮತ್ತೆ ಹೇಗೆ ದಾರಿಗೆ ಬರುತ್ತದೆ ಎನ್ನುವುದು ಚಿತ್ರದ ಮುಂದಿನ ಕತೆ.