ನೈಟ್ ರೋಡ್ ಚಿತ್ರವನ್ನು ಗೋಪಾಲ್ ಹಳೆಪಾಳ್ಯ ನಿರ್ದೇಶನ ಮಾಡಿದ್ದಾರೆ. ಸಿನಿಮಾದಲ್ಲಿ ಧರ್ಮ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಉಳಿದಂತೆ ಜ್ಯೋತಿ ರೈ, ಗಿರಿಜಲೋಕೇಶ್ ಗೋವಿಂದೇಗೌಡ, ರವಿಕಿಶೋರ್, ಮಂಜು ರಂಗಾಯಣ, ಪ್ರಭು, ಸಚ್ಚಿ,ಮಂಜು ಕೃಷ್, ರೇಣು ಶಿಕಾರಿ, ಸುನೇತ್ರ, ಚಂದ್ರ ಮೂರ್ತಿ ಮುಂತಾದವರು ತಾರಾಗಣದಲ್ಲಿದ್ದಾರೆ. ಸತೀಶ್ ಆರ್ಯನ್ ಸಂಗೀತ, ಪ್ರವೀಣ್ ಶೆಟ್ಟಿ ಛಾಯಾಗ್ರಾಹಣ ಹಾಗೂ ಜೀವನ್ ಪ್ರಕಾಶ್ ಸಂಕಲನ ಸಿನಿಮಾಗಿದೆ. ನೈಟ್ ರೋಡ್ ಸಿನಿಮಾವನ್ನು ಪುನರ್ ಗೀತಾ ಸಿನಿಮಾಸ್ ಎಂಬ ಬ್ಯಾನರಿನಲ್ಲಿ ಗೋಪಾಲ್ ಹಳೆಪಾಳ್ಯ ಅವರೇ ನಿರ್ಮಾಣ ಮಾಡಿದ್ದಾರೆ.