ನಾಟ್ ಔಟ್ ಸಿನಿಮಾವನ್ನು ಅಂಬರೀಶ್ ಎಂ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಅಜಯ್ ಪೃಥ್ವಿ ನಾಯಕನಾಗಿ ಹಾಗೂ ರಚನಾ ಇಂದರ್ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ರವಿಶಂಕರ್, ಕಾಕ್ರೋಚ್ ಸುಧೀರ್, ಪ್ರಶಾಂತ್ ಸಿದ್ಧಿ, ಗೋವಿಂದೇ ಗೌಡ, ಗೋಪಾಲ ಕೃಷ್ಣ ದೇಶಪಾಂಡೆ ತಾರಾಗಣದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ ಮತ್ತು ಹಾಲೇಶ್ ಎಸ್ ಛಾಯಾಗ್ರಹಣ ಸಿನಿಮಾಗಿದೆ. ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ಅವರುಗಳು ‘ನಾಟ್ ಔಟ್’ ಸಿನಿಮಾ ನಿರ್ಮಾಣ ಮಾಡಿದ್ದಾರೆ.