ಓ ಮನಸೇ ಸಿನಿಮಾವನ್ನು ಡಿ.ಜಿ ಉಮೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಾಘವೇಂದ್ರ ರಾಜ್‌ಕುಮಾರ್, ಧರ್ಮ ಕೀರ್ತಿರಾಜ್, ಸಂಚಿತಾ ಪಡುಕೋಣೆ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಸಾಧುಕೋಕಿಲ, ಹರೀಶ್ ರೋಯ್, ವಾಣಿಶ್ರೀ, ಕಿಲ್ಲರ್ ವೆಂಕಟೇಶ್, ಶೋಭರಾಜ್, ಜಯರಾಮ್ ಮುಂತಾದವರು ಫೋಷಕ ಪಾತ್ರಗಳಲಗಳಲ್ಲಿ ನಟಿಸಿದ್ದಾರೆ. ಶಿಕ್ಷಣಕ್ಕೆ ಮಹತ್ವ ಕೊಡುವ ಸಿನಿಮಾ ಇದಾಗಿದ್ದು, ಲವ್ ಸಸ್ಪೆನ್ಸ್ ಕೂಡ ಇದೆ. ಈ ಸಿನಿಮಾಗೆ ಜೆಸ್ಸಿ ಗಿಫ್ಟ್ ಸಂಗೀತ ನೀಡಿದ್ದು, ಆರ್.ಸೀನು ಛಾಯಾಗ್ರಹಣವಿದೆ. ಶ್ರೀ ಫ್ರೆಂಡ್ಸ್ ಮೂವಿ ಮೇಕರ್ ಲಾಂಛನದಲ್ಲಿ ಭೈರೇಗೌಡ, ಧನಂಜಯ್, ಯುವರಾಜು, ಸು.ಕಾ.ರಾಮು ಮತ್ತು ವೆಂಕಟೇಶ್ ನಿರ್ಮಿಸಿದ್ದಾರೆ.