ಓ ನನ್ನ ಚೇತನ ಸಿನಿಮಾವನ್ನು ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ಅಪೂರ್ವ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ
ಅಪೂರ್ವ ನಿರ್ದೇಶನ ಮಾಡಿದ್ದಾರೆ. ಇದೊಂದು ಮಕ್ಕಳ ಸಿನಿಮಾ. ಹೀಗಾಗಿ ಚಿತ್ರಕ್ಕೆ ಸ್ಮಾರ್ಟ್ ಪೋನ್ ಜೀವನ ಎಂಬ ಟ್ಯಾಗ್‌ಲೈನ್ ಇಡಲಾಗಿದೆ.
ಇಂದಿನ ಮಕ್ಕಳು ಸ್ಮಾರ್ಟ್ ಫೋನ್‌ಗೆ ಅಡಿಕ್ಟ್ ಆಗಿರುತ್ತಾರೆ. ಹಾಗಾಗಿ ಇಂದಿನ ಮಕ್ಕಳು ಮತ್ತು ಸ್ಮಾರ್ಟ್ ಫೋನ್ ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಪ್ರತೀಕ್, ಪೃಥನ್, ಬೇಬಿ ದಾನೇಶ್ವರಿ, ಡಿಂಪನಾ ಮತ್ತು ಮೋನಿಕಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಎಸ್ & ಎಸ್ ಬ್ಯಾನರ್ ನಿರ್ಮಿಸಿರುವ ಓ ನನ್ನ ಚೇತನ ಸಿನಿಮಾಗೆ ಪ್ರದೀಪ್ ವರ್ಮಾ ಸಂಗೀತಾ ನೀಡಿದ್ದಾರೆ. ಗುರು ಪ್ರಶಾಂತ್ ಛಾಯಾಗ್ರಹಣ ಮತ್ತು ಕೆಎಂ ಪ್ರಕಾಶ್ ಅವರ ಸಂಕಲನ ಚಿತ್ರಕ್ಕಿದೆ.