ಬೆಂಗಳೂರಿನಿಂದ ಐದು ಸ್ನೇಹಿತರು ಅದರಲ್ಲಿ ಮೂವರು ಹುಡುಗರು, ಇಬ್ಬರು ಹುಡುಗಿಯರು ಕಾರ್ ನಲ್ಲಿ ಹೊರಡುತ್ತಾರೆ. ದೂರದ ಹೋಮ್ ಸ್ಟೇಗೆ ಪ್ರಯಾಣ ಬೆಳೆಸುವ ಇವರು ಒಂದರ ನಂತರ ಒಂದರಂತೆ ಕಥೆ ಹೇಳಲು ಶುರು ಮಾಡುತ್ತಾರೆ.
ತಾವು ಕೇಳಿದ ನಿಜ ಜೀವನದ ಭೂತದ ಕಥೆಗಳನ್ನು ಹೇಳುತ್ತ ಇವರ ಜರ್ನಿ ಮುಂದುವರೆಯುತ್ತದೆ. ತಾವು ತಮ್ಮ ಪ್ರಯಾಣದಲ್ಲಿ ಹೇಳಿದ ಕಥೆಗಳ ಅನುಭವ ತಮಗೇ ಆದರೆ ಅವರ ಪರಿಸ್ಥಿತಿ ಹೇಗಿರುತ್ತದೆ ಎಂಬುದನ್ನು ಚಿತ್ರ ವಿವರಿಸುತ್ತದೆ.
`ಒಂದು ಕಥೆ ಹೇಳ್ಲಾ' ಚಿತ್ರವನ್ನು ನಿರ್ದೇಶಕ ಗಿರೀಶ್ ಜಿ ನಿರ್ದೆಶಿಸಿದ್ದಾರೆ.ಚಿತ್ರದಲ್ಲಿ ತಾಂಡವ ರಾಮ್,ಶಕ್ತಿ ಸೋಮಣ್ಣ,ಪ್ರತೀಕ್ ತಕ್ಕರ್, ತಾರಾ,ಪ್ರಿಯಾಂಕ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಐದು ಪ್ರಮುಖ ಉಪ ಕಥೆಗಳು ಬರುತ್ತವೆ.ಒಂದು ಕಥೆಯಲ್ಲಿ ನಿರ್ದೇಶಕ ಗಿರೀಶ್ ಜಿ ಯವರೇ ನಟಿಸಿದ್ದಾರೆ. ಚಿತ್ರವು ಹಾರರ್ ಸರಣಿ ಕತೆಯುಳ್ಳದ್ದಾಗಿದೆ.