ಹರಿಪ್ರಸಾದ್ ಜಯಣ್ಣ ನಿರ್ದೇಶನದಲ್ಲಿ ಮೂಡಿಬಂದಿರುವ ಪದವಿ ಪೂರ್ವ ಚಿತ್ರದಲ್ಲಿ ಪೃಥ್ವಿ ಶಾಮನೂರು ಮತ್ತು ಅಂಜಲಿ ಅನೀಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಯಶಾ ಶಿವಕುಮಾರ್, ಆದಿತಿ ಪ್ರಭುದೇವ ಮತ್ತು ನಟರಾಜ್ ಭಟ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಥಜೆ ಛಾಯಾಗ್ರಹಣ ಮತ್ತು ಅರ್ಜುನ ಜನ್ಯ ಸಂಗೀತ ಚಿತ್ರಕ್ಕಿದೆ.
ಕಥೆ: ಆಗಷ್ಟೇ ಪಿಯುಸಿಗೆ ಪ್ರವೇಶಿಸಿರುವ ನಾಯಕನಿಗೆ (ಪೃಥ್ವಿ) ಸ್ನೇಹಿತರ ಮೇಲೆ ಎಲ್ಲಿಲ್ಲದ ಪ್ರೀತಿ. ಸ್ನೇಹಿತರೊಂದಿಗೆ ತನ್ನ ಪಾಡಿಗೆ ತಾನಿರುವ ಹುಡುಗ. ಫ್ರೆಂಡ್ಸ್ ಇದ್ರೇನೆ ಜೀವನ ಎನ್ನುವ ಅಪ್ಪಟ ಸ್ನೇಹಜೀವಿ. ಒಂಚೂರು ತರಲೆ, ಸ್ವಲ್ಪ ತುಂಟ. ಆದರೆ, ಅಪ್ಪನ ಆಸೆಯಂತೆ ವೈದ್ಯನಾಗಬೇಕೆಂಬ ಕನಸು ಇರುತ್ತದೆ. ಇಂತಹ ಹುಡುಗನಿಗೆ ಪಿಯುಸಿ ಬದುಕು ಏನೆಲ್ಲಾ ಏರಿಳಿತಗಳನ್ನು ತೋರಿಸುತ್ತದೆ ಎನ್ನುವುದು ಸಿನಿಮಾ ಕಥೆ.