ಪರಿಮಳ ಡಿಸೋಜಾ ಸಿನಿಮಾವನ್ನು ಗಿರಿಧರ್ ಹೆಚ್.ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ನಟಿ ಭವ್ಯ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ಉಳಿದಂತೆ ಕೋಮಲ ಬನವಾಸೆ, ಶ್ರೀನಿವಾಸ ಪ್ರಭು, ಶಿವಕುಮಾರ್ ಆರಾಧ್ಯ, ಶಂಕನಾದ ಅಂಜನಪ್ಪ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಕ್ರಿಸ್ಟೋಫರ್ ಜೋಯ್‌ಸನ್ ಈ ಸಿನಿಮಾಗೆ ಸಂಗೀತ ನೀಡಿದ್ದು, ರಾಮ್ ಕೆ ರೆಡ್ಡಿ ಛಾಯಾಗ್ರಹಣವಿದೆ. ವಿನೋದ್ ಶೇಷಾದ್ರಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.