ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಮೂಡಿಬಂದ ಪೋಲಿಸ್ ಸ್ಡೋರಿ ಚಿತ್ರದಲ್ಲಿ ಸಾಯಿಕುಮಾರ್ ಮುಖ್ಯಪಾತ್ರದಲ್ಲಿ ನಟಿಸಿದರು. ಕನ್ನಡ ಮಾತ್ರವಲ್ಲದೇ ತೆಲಗು ಮತ್ತು ತಮಿಳು ಡಬ್ ವರ್ಷನ್ ಗಳಲ್ಲಿ ಕೂಡ ಚಿತ್ರ ಅಪೂರ್ವ ಜಯಭೇರಿ ಬಾರಿಸಿತು. ಚಿತ್ರಕ್ಕೆ ಸಾಧು ಕೋಕಿಲಾ ಸಂಗೀತ ನೀಡಿದರು.
ಒಬ್ಬ ನಿಷ್ಠುರ ಮತ್ತು ಶಾರ್ಟ್ ಟೆಂಪರ್ ಪೋಲಿಸ್ ಅಧಿಕಾರಿ ತನ್ನ ಕ್ರಿಮಿನಲ್ ಗಳ ವಿರುದ್ಧ ಹೋರಾಡುವ ಭಿನ್ನ ರೀತಿಗಳಿಂದ ಸಚಿವರಿಂದ ಪದೇ ಪದೇ ನಿಂದನೆಗೆ ಒಳಗಾಗುತ್ತಿರುತ್ತಾನೆ. ಬ್ಲ್ಯಾಕ್ ಟೈಗರ್ ಎಂಬ ಕ್ರಿಮಿನಲ್ ನ್ನು ಇವನು ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಚಿತ್ರದ ಕಥೆ.