ಪಾಲಿಟಿಕ್ಸ್ ಕಲ್ಯಾಣ ಸಿನಿಮಾವನ್ನು ಕವಿ ರಾಜೇಶ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಪಂಕಜ್ ನಾರಾಯಣ್ ನಾಯಕನಾಗಿ ಮತ್ತು ಸಸ್ಯ ಕಂಚು ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಶಂಕರ್ ಅಶ್ವತ್ಥ್, ಮೈಮ್ ಗೋಪಿ, ವಿ ಮನೋಹರ್, ಗಿರೀಜಾ ಲೋಕೇಶ್, ಮೈಸೂರು ರಮಾನಂದ್, ಸುನೇತ್ರಾ ಪಂಡಿತ್, ದತ್ತಾತ್ರೇಯ ಕುರುಹಟ್ಟೆ, ಹನುಮಂತೇ ಗೌಡ, ಪಾಪ ಪಾಂಡು ಚಿದಾನಂದ, ನಾಗೇಂದ್ರ ಶಾ, ವಿಜಯ್ ಭಾಸ್ಕರ್, ರಜನಿ ಶೆಟ್ಟಿ, ತನುಜಾ ಸೇರಿದಂತೆ ಹಲವರು ತಾರಾಗಣದಲ್ಲಿದ್ದಾರೆ. ಈ ಚಿತ್ರವನ್ನು ಗಣೇಶ್ ಕೃಷ್ಣಮೂರ್ತಿ ನಿರ್ಮಾಣ ಮಾಡಿದ್ದಾರೆ. ರೋಹನ್ ದೇಸಾಯಿ ಸಂಗೀತ ನಿರ್ದೇಶನದ ಜೊತೆಗೆ ಛಾಯಾಗ್ರಹಣ ಮಾಡಿದ್ದಾರೆ.