ಮಣಿರತ್ನಂ ನಿರ್ದೇಶನದ 'ಪೊನ್ನಿಯಿನ್ ಸೆಲ್ವನ್' ಭಾಗ-1 ಚಿತ್ರದ ಮುಂದುವರೆದ ಭಾಗ 'ಪೊನ್ನಿಯಿನ್ ಸೆಲ್ವನ್' ಭಾಗ-2. ಚಿತ್ರದಲ್ಲಿ ಐಶ್ವರ್ಯಾ ರೈ, ವಿಕ್ರಂ, ಕಾರ್ತಿ, ತ್ರಿಶಾ, ಜಯಂ ರವಿ, ಪ್ರಕಾಶ್ ರೈ, ಐಶ್ವರ್ಯಾ ಲಕ್ಷ್ಮಿ, ಶೋಭೀತ ಧುಲಿಪಾಲ ಮುಂತಾದವರು ನಟಿಸಿದ್ದಾರೆ.
ಬಿಡುಗಡೆ: 'ಪೊನ್ನಿಯಿನ್ ಸೆಲ್ವನ್' ಭಾಗ-2 2023ರ ಏಪ್ರಿಲ್ 28ರಂದು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಲ್ಲಿ ಬಿಡುಗೆಡೆಯಾಯಿತು.
ಕಥೆ: ಮೊದಲ ಭಾಗದಲ್ಲಿ ಸತ್ತು ಹೋಗಿದ್ದ ಎಂದುಕೊಂಡಿದ್ದ ಅರುಣ್ಮೋಳಿ (ಜಯಂ ರವಿ) ಸಾವಿನ ಕದ ತಟ್ಟಿ ಬಂದಿರುತ್ತಾನೆ. ವಲ್ಲವರಾಯ(ಕಾರ್ತಿ)ನ ಸಹಾಯದಿಂದ ಬದುಕುಳಿದ ಆತ ಬೌದ್ ದೇವಾಲಯದಲ್ಲಿ ಆಶ್ರಯ ಪಡೆದು ಚೇತರಿಸಿಕೊಳ್ಳುತ್ತಾನೆ. ಇತ್ತ ಅರುಣ್ಮೋಳಿ ಸಮುದ್ರದಲ್ಲಿ ಮುಳುಗಿ ಸತ್ತು ಹೋದ ಎಂದು ಚೋಳರು, ಪಾಂಡ್ಯರು ಎಲ್ಲರೂ ಭಾವಿಸಿರುತ್ತಾರೆ. ಮತ್ತೊಂದು ಕಡೆ ವೀರ ಪಾಂಡಿಯ್ಯನ್(ನಾಸರ್) ಸಾವಿಗೆ ಆದಿತ್ಯ ಕರಿಕಾಲನ್(ವಿಕ್ರಂ)ನ ಕೊಂದು ಪ್ರತೀಕಾರ ತೀರಿಸಿಕೊಳ್ಳಲು ನಂದಿನಿ(ಐಶ್ವರ್ಯ ರೈ) ಹಾಗೂ ಪಾಂಡ್ಯರ ಗುಂಪು ಹವಣಿಸುತ್ತಿರುತ್ತದೆ.
ಮತ್ತೊಂದು ಕಡೆ ಚೋಳ ವಂಶಸ್ಥನೇ ಆದ್ರು ಮಧುರಾಂತಕ(ರಹಮಾನ್) ಸಿಂಹಾಸನದ ಮೇಲೆ ಕಣ್ಣಿಟ್ಟಿರುತ್ತಾನೆ. ಅದಕ್ಕಾಗಿ ಎಲ್ಲದಕ್ಕು ಸಿದ್ಧ ಎನ್ನುತ್ತಾನೆ. ಇನ್ನು ಕರಿಕಾಲನ್ ಹಾಗೂ ನಂದಿನಿ ನಡುವೆ ಏನು ನಡೆದಿತ್ತು? ಮಂದಾಕಿನಿ ಅಲಿಯಾಸ್ ಊಮೈ ರಾಣಿ(ಐಶ್ವರ್ಯ ರೈ ದ್ವಿಪಾತ್ರ) ಯಾರು? ಮಧುರಾಂತಕನಿಗೆ ಸಿಂಹಾಸನ ಸಿಕ್ತಾ? ಇಲ್ವಾ? ಚೋಳರ ವಿರುದ್ಧ ರಾಷ್ಟ್ರಕೂಟರು ಯುದ್ಧಕ್ಕೆ ನಿಂತಿದ್ದೇಕೆ? ಗೆದ್ದವರ್ಯಾರು? ಸೋತವರ್ಯಾರು? ಪಾಂಡ್ಯರ ಕಥೆ ಏನಾಯ್ತು? ಚೋಳರ ಮೇಲೆ ನಂದಿನಿ ದ್ವೇಷಕ್ಕೆ ಕಾರಣ ಏನು? ಅನ್ನುವುದನ್ನು ಚಿತ್ರದಲ್ಲಿ ತೋರಿಸಲಾಗಿದೆ.