ಪೌಡರ್ ಸಿನಿಮಾವನ್ನು ಗುಳ್ಟು ಸಿನಿಮಾ ಖ್ಯಾತಿಯ
ಜರ್ನಾದನ್ ಚಿಕ್ಕಣ್ಣ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ
ದಿಗಂತ್ ಮಂಚಾಲೆ,
ಧನ್ಯಾ ರಾಮ್‌ಕುಮಾರ್,
ಶರ್ಮಿಳಾ ಮಾಂಡ್ರೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ರಂಗಾಯಣ ರಘು, ಚೈತನ್ಯಶ್ರೀ, ಅನಿರುದ್ಧ್ ಆಚಾರ್ಯ, ರವಿಶಂಕರ್ ಗೌಡ, ನಾಗಭೂಷಣ್ ಎನ್.ಎಸ್ ಮುಂತಾದವರು ತಾರಾಗಣದಲ್ಲಿದ್ದಾರೆ. ವಾಸುಕಿ ವೈಭವ್ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ. ಈ ಸಿನಿಮಾವನ್ನು ಕಾರ್ತಿಕ್ ಕೆ ಗೌಡ ತಮ್ಮ ಕೆಆರ್‌ಜಿ ಸ್ಟುಡಿಯೋ ಬ್ಯಾನರ್‌ನಲ್ಲಿ ನಿರ್ಮಾಣ ಮಾಡಿದ್ದಾರೆ.
ಬಿಡುಗಡೆ: ಪೌಡರ್ ಸಿನಿಮಾ 2024ರ ಆಗಸ್ಟ್ 23ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಕಥೆ: ಸೂರ್ಯ (ದಿಗಂತ್) ಸೂಪರ್ ಮಾರ್ಕೆಟ್‌ನಲ್ಲಿ ಮಾಡುವ ಹುಡುಗ. ಧನ್ಯಾ ನಿತ್ಯ (ಧನ್ಯಾ ರಾಮ್‌ಕುಮಾರ್) ಇಲ್ಲಿ ನರ್ಸ್. ಇಬ್ಬರ ನಡುವೆ ಪ್ರೀತಿ ಮುರಿದು ಬಿದ್ದಿರುತ್ತೆ. ಮತ್ತೆ ಅದು ಕೂಡಿಕೊಂಡಿರುತ್ತೆ. ಈ ಬದುಕು ಸಾಕಾಗಿದೆ. ಜೀವನದಲ್ಲಿ ಹೇಗಾದರೂ ಮಾಡಿ ದುಡ್ಡು ಮಾಡಬೇಕು ಅಂತ ದಿಗಂತ್, ಧನ್ಯಾ ಹಾಗೂ ಗೆಳೆಯ ಅನಿರುದ್ಧ್ ನಿರ್ಧಾರ ಮಾಡುತ್ತಾರೆ. ಇಂತಹ ಆಲೋಚನೆಯಲ್ಲಿದ್ದ ಮೂವರಿಗೆ 'ಪೌಡರ್' (ಡ್ರಗ್ಸ್) ಸಿಗುತ್ತೆ. ಇಲ್ಲಿಂದ ಮುಂದೇನಾಗುತ್ತೆ ಅನ್ನೋದೇ ಕಥೆ.