ಸಾಹೇಬ ಮತ್ತು ಬೃಹಸ್ಪತಿ ನಂತರ ಮನೋರಂಜನ್ ರವಿಚಂದ್ರನ್ ನಾಯಕನಾಗಿ ನಟಿಸುತ್ತಿರುವ ಚಿತ್ರ ಪ್ರಾರಂಭ. ಕೀರ್ತಿ ಕಲಕೇರಿ ನಾಯಕಿಯಾಗಿ ನಟಿಸಿದ್ದಾರೆ. ಮನು ಕಲ್ಯಾಡಿ ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಜಗದೀಶ್ ಕಲ್ಯಾಡಿ ಬಂಡವಾಳ ಹೂಡಿದ್ದಾರೆ. ಚಿತ್ರಕ್ಕೆ ಪ್ರಜ್ವಲ್ ಪೈ ಸಂಗೀತವಿದೆ. ಚಿತ್ರದ ಮೊದಲ ಟೀಸರ್ 2019 ಆಗಸ್ಟ್ 23 ರಂದು ಬಿಡುಗಡೆಯಾಯಿತು. ಟೀಸರ್ ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಧ್ವನಿ ನೀಡಿದ್ದರು.