ಪ್ರೇಮಂ ಪೂಜ್ಯಂ (2021)(U/A)
ಪ್ರೇಮಂ ಪೂಜ್ಯಂ ಕಥೆ
ಪ್ರೇಮಂ ಪೂಜ್ಯಂ ಪ್ರೇಮ್ರವರ 25 ನೇ ಚಿತ್ರವಾಗಿದ್ದು, ಈ ಚಿತ್ರವನ್ನು ರಾಘವೇಂದ್ರರವರು ನಿರ್ದೇಶಿಸಿ ಸಂಗೀತ ನೀಡಿದ್ದಾರೆ. ಡಾ.ರಕ್ಷಿತ್ ಕೆಡಂಬಡಿ, ಮನೋಜ್ ಕೃಷ್ಣನ್ ಮತ್ತು ಡಾ ಜಾನಕಿರಾಮನ್ ನಿರ್ಮಿಸಿದ್ದಾರೆ. ಬೃಂದಾ ಆಚಾರ್ಯ ಮತ್ತು ಐಂದ್ರಿತಾ ರೇ ನಾಯಕಿಯರ ಪಾತ್ರದಲ್ಲಿ ನಟಿಸಿದ್ದಾರೆ. ಮಾಸ್ಟರ್ ಆನಂದ್, ಅನು ಪ್ರಭಾಕರ್, ಮಾಳವಿಕಾ, ಅವಿನಾಶ್, ಟಿ.ಎಸ್.ನಾಗಾಭರಣ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಕಥೆ:
ಮಂಡ್ಯದ ಹಳ್ಳ ಹೈದ ಶ್ರೀಹರಿ(ಪ್ರೇಮ್) ವೈದ್ಯನಾಗುವ ಕನಸಿನೊಂದಿಗೆ ಓದಲು ಬರ್ತಾನೆ. ಅಲ್ಲಿ ಲವ್ ಅಟ್ ಫಸ್ಟ್ ಸೈಟ್ ಆಗೇ ಬಿಡುತ್ತೆ. ಶೆರ್ಲಿಗೆ ಕ್ಲೀನ್ ಬೋಲ್ಡ್ ಆಗೋ ಶ್ರೀಹರಿ ಆಕೆಯನ್ನು ಅಂಬಾರಿಯಲ್ಲಿನ ದೇವತೆಯಂತೆ ಪೂಜಿಸುತ್ತಾನೆ. ಈ ಶ್ರೀಹರಿಯ ಪ್ರೀತಿ ಕೊಂಚ ಡಿಫರೆಂಟ್. ಮೋಹವಿಲ್ಲದ, ಕಾಮಮುಕ್ತ ಪವಿತ್ರ ಪ್ರೀತಿ ಇವನದ್ದು. ಇವನ ಪ್ರೀತಿ ಪರಿಗೆ ದೇವರೇ ಶರಣಾಗಿ ಬಿಡಬೇಕು. ಅಂತಹ ಪ್ರೀತಿ ಇವನದ್ದು. ಇಂತಹ ಪ್ರೇಮಿಗೆ ತನ್ನ ಪ್ರೀತಿ ಸಿಗುತ್ತಾ ಇಲ್ಲಾವಾ? ಅನ್ನೋದೇ ಸಿನಿಮಾ. ಸಿಗುವುದಿಲ್ಲ ಎಂದು ಕೊಂಡ ಪ್ರೀತಿ ಸಿಕ್ಕೂ ಸಿಗದೇ ಹೋದಾಗ ಏನಾಗುತ್ತದೆ ಎನ್ನುವುದು ಎಂಬುದು ಚಿತ್ರದ ಕಥೆ.
ಬೆಳವಣಿಗೆ:
2019, ಎಪ್ರಿಲ್ 4 ಯುಗಾದಿ ದಿನದಂದು ಚಿತ್ರದ ಮೊದಲ ಲುಕ್ ಬಿಡುಗಡೆಯಾಯಿತು. ಚಿತ್ರದ ಟ್ರೇಲರ್ ಆಕ್ರೋಬರ್ 14, 2021 ರಂದು ಬಿಡುಗಡೆಯಾಯಿತು. ನವೆಂಬರ್ 12, 2021 ರಂದು ಚಿತ್ರ ಬಿಡುಗಡೆಯಾಯಿತು.