ನವರಸ ನಾಯಕ ಜಗ್ಗೇಶ್, ಮಧೂ, ಸುಧಾರಾಣಿ,ಪ್ರಮೋದ್ ಮಂಜು ಮುಖ್ಯಪಾತ್ರದಲ್ಲಿ ಅಭಿನಯಿಸಿರುವ `ಪ್ರೀಮಿಯರ್ ಪದ್ಮಿನಿ'ಚಿತ್ರ ದಾಂಪತ್ಯ ಸಂಬಂಧದ ಕುರಿತಾಗಿ ಇದೆ. ಇಲ್ಲಿ ಜಗ್ಗೇಶ್ ಡ್ರೈವರ್ ಪಾತ್ರ ಮಾಡಿದ್ದಾರೆ. ಈ ಪಾತ್ರ ಬದುಕಿನ ನಾನಾ ಮಜಲುಗಳನ್ನು ತೆರೆದಿಡುತ್ತದೆ.
ಹಳೆ ಕಾಲದ ಸಂಪ್ರದಾಯ ಆಚಾರ-ಸಂಪ್ರದಾಯಗಳಿಗೆ ಕಟ್ಟು-ಬೀಳುವ ಗಂಡ ಮತ್ತು ಆಧುನಿಕ ಜೀವನದ ರೀತಿ ಇರಬೇಕನ್ನುವ ಹೆಂಡತಿ. ತದ್ವಿರುದ್ದ ವ್ಯಕ್ತಿತ್ವಗಳ ದಾಂಪತ್ಯ ಜೀವನವನ್ನು ತೆರೆ ಮೇಲೆ ಇಡಲು `ಪ್ರೀಮಿಯರ್ ಪದ್ಮಿನಿ'ಬರಲಿದೆ. ಡೈವೋರ್ಸ್ ಮತ್ತು ಭಾವನೆಗಳ ತಾಕಲಾಟದಲ್ಲಿ ಚಿತ್ರ ಸಾಗುತ್ತದೆ.
ಚಿತ್ರದ ಮೊದಲ ಟ್ರ್ಯಾಕ್ ಡಿಸೆಂಬರ್ 5,2018 ರಂದು ನಿರ್ಮಾಪಕಿ ಶೃತಿ ನಾಯ್ಡುರವರ ಜನ್ಮದಿನ ಪ್ರಯುಕ್ತ ಬಿಡುಗಡೆಯಾಯಿತು.ಎರಡನೇ ಹಾಡು `ನಾ ಹುಡುಕೋ ಹಾಳೆ' ಗೀತೆಯನ್ನು ರಕ್ಷಿತ್ ಶೆಟ್ಟಿ ಜನೇವರಿ 7 ಬಿಡುಗಡೆ ಮಾಡಿದರು.ರಮೇಶ್ ಇಂದಿರಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದರೆ,ನಿರ್ಮಾಪಕಿ ಶ್ರುತಿ ನಾಯ್ಡು ಬಂಡವಾಳ ಹೂಡುತ್ತಿದ್ದಾರೆ. ಚಿತ್ರದ ಟ್ರೇಲರ್ ಮಾರ್ಚ್ 17,2019 ರಂದು ಜಗ್ಗೇಶ್ ಜನ್ಮದಿನ ಪ್ರಯುಕ್ತ ಬಿಡುಗಡೆಯಾಯಿತು.