ಖ್ಯಾತ ಚಿತ್ರನಟಿ ಪ್ರಿಯಾ (ಶ್ರೀದೇವಿ) ಮತ್ತು ಅವಳ ಬಾಯ್ ಫ್ರೆಂಡ್ ಭರತ್ (ಅಂಬರೀಶ್) ಮದುವೆಯಾಗಲು ಅವಳ ಮ್ಯಾನೇಜರ್ ಅಡ್ಡಿಪಡಿಸುತ್ತಿರುತ್ತಾನೆ. ಹಣಕಾಸಿನ ವಿಚಾರದಲ್ಲಿ ತನ್ನ ಮೇಲೆ ಆಧಿಕಾರ ನೆಡಸುತ್ತಿರುವ ಮತ್ತು ಅವಳ ಮದುವೆಗೆ ಅಡ್ಡಿಪಡಿಸುತ್ತಿರುವ ಮ್ಯಾನೇಜರ್ ನನ್ನು ಮಟ್ಟಹಾಕಲು ಲಾಯರ್ ಗಣೇಶ್ (ರಜಿನಿಕಾಂತ್) ಮೊರೆ ಹೋಗುತ್ತಾಳೆ. ಈ ಸಮಸ್ಯೆಯನ್ನು ಭರತ್ ಹೇಗೆ ಬಗೆ ಹರಿಸುತ್ತಾನೆ ಎಂಬುದು ಚಿತ್ರದ ಕಥೆ.ಈ ಚಿತ್ರ ಅದ್ಭುತ ಯಶಸ್ಸು ಕಂಡು 175 ದಿನ ಪ್ರದರ್ಶನ ಕಂಡಿತು.