ರಾಜ ರಾಣಿ ರೋರರ್ ರಾಕೆಟ್ ಎಂಬ ಸಿನಿಮಾವನ್ನು ಕೆಂಪೇಗೌಡ ಮಾಗಡಿ ಅವರು ನಿರ್ದೇಶನ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ, ರಿಷಬ್ ಶೆಟ್ಟಿ ಅಭಿನಯದ ಬೆಲ್ ಬಾಟಮ್, ಶರಣ್ ಅಭಿನಯದ ರ್ಯಾಂಬೊ-2 ಸೇರಿದಂತೆ ಸುಮಾರು 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದ ಭೂಷಣ್ ಚುಟು..ಚುಟು..ಅಂತೈತಿ ಹಾಡಿನ ಮೂಲಕ ಖ್ಯಾತಿ ಪಡೆದಿದ್ದರು. ಸಾಲು ಸಾಲು ಹಿಟ್ ಸಿನಿಮಾಗಳ ನಾಯಕರಿಗೆ ಹೆಜ್ಜೆ ಹಾಕಿಸಿದ್ದ ಭೂಷಣ್, ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಮೂಲಕ ನಾಯಕ ನಟನಾಗಿ ಆಗಿ ಬೆಳ್ಳಿ ತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಇನ್ನು ರಾಜ ರಾಣಿ ರೋರರ್ ರಾಕೆಟ್ ಚಿತ್ರದ ಬಾರೇ..ಬಾರೇ..ರಾಜಕುಮಾರಿ ಹಾಡು ಸಖತ್ ಹಿಟ್ ಆಗಿದ್ದು, ಸಂಜಿತ್ ಹೆಗ್ಡೆ ಧ್ವನಿಗೆ ಕೇಳುಗರು ಮನಸೋತಿದ್ದಾರೆ.
ರಾಜ ರಾಣಿ ರೋರರ್ ರಾಕೆಟ್ ಎನ್ನುವುದು ನಾಲ್ಕು ಪ್ರಮುಖ ಪಾತ್ರಗಳ ಹೆಸರಾಗಿದ್ದು, ಭೂಷಣ್, ಮಾನ್ಯ, ಸಂತೋಷ್, ಮನೋಜ್ ಕುಮಾರ್, ಎಂ.ಡಿ ಕೌಶಿಕ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಹಿರಿಯ ನೃತ್ಯ ನಿರ್ದೇಶಕ ಮೂಗೂರು ಸುಂದರ್ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಜ ರಾಣಿ ರೋರರ್ ರಾಕೆಟ್ ಚಿತ್ರಕ್ಕೆ ಲೇಖನ ಕ್ರಿಯೇಷನ್ಸ್ ಲಾಂಛನದಲ್ಲಿ ನಾಗರಾಜ್ ಪಿ ಅಜ್ಜಂಪುರ ಬಂಡವಾಳ ಹೂಡಿದ್ದಾರೆ.