Updated: Tuesday, September 1, 2020, 08:58 PM [IST]
ತಾಯವ್ವ ಚಿತ್ರದಿಂದ ಸಿನಿ ಜರ್ನಿ ಆರಂಭಿಸಿದ ಕಿಚ್ಚ ಸುದೀಪ್ ತಮ್ಮ ಎರಡುವರೆ ದಶಕಗಳ ಸಿನಿ ಜೀವನದಲ್ಲಿ ಕನ್ನಡ ಮಾತ್ರವಲ್ಲದೇ ಹಿಂದಿ, ತೆಲಗು ಮತ್ತು ತಮಿಳು ಚಿತ್ರರಂಗಗಳಲ್ಲೂ ಗುರುತಿಸಿಕೊಂಡಿದ್ದಾರೆ. ರಿಮೇಕ್ ಎಲ್ಲಾ ಚಿತ್ರರಂಗದಲ್ಲೂ ಸಮಾನ್ಯ. ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟರು ಹಲವಾರು ರಿಮೇಕ್ ಚಿತ್ರಗಳಲ್ಲಿ ನಟಿಸಿದ್ದರೂ, ಮೂಲ ಚಿತ್ರಗಳಿಗಿಂತ ಅದ್ಧೂರಿಯಾಗಿ ರಿಮೇಕ್ ತಯಾರಿಸಿ ಯಶಸ್ಸು ಪಡೆದವರು ಕ್ರೇಜಿ ಸ್ಟಾರ್ ರವಿಚಂದ್ರನ್ ಮತ್ತು ಕಿಚ್ಚ ಸುದೀಪ್ ಇಬ್ಬರೇ.. ಸುದೀಪ್ ನಟನೆ ಮಾತ್ರವಲ್ಲದೇ ಕೆಲ ರಿಮೇಕ್ ಚಿತ್ರಗಳ ನಿರ್ದೇಶನ ಮಾಡಿ ಕೂಡ ಗೆದ್ದಿದ್ದಾರೆ..ಈ ಹಿನ್ನಲೆಯಲ್ಲಿ ಕಿಚ್ಚ ಅಭಿನಯಿಸಿದ ರಿಮೇಕ್ ಚಿತ್ರಗಳು ಇಲ್ಲಿವೆ ನೋಡಿ..
ಇದು 1999 ರಲ್ಲಿ ತೆರೆಕಂಡ ತಮಿಳಿನ ಸೇತು ಚಿತ್ರದ ರಿಮೇಕ್. ತಮಿಳಿನಲ್ಲಿ ವಿಕ್ರಮ್ ನಾಯಕನಾಗಿ ನಟಿಸಿದ್ದರೆ, ಹಿಂದಿ ರಿಮೇಕ್ ನಲ್ಲಿ ಸಲ್ಮಾನ್ ಖಾನ್ ನಾಯಕನಾಗಿ ನಟಿಸಿದರು..ಓಂ ಪ್ರಕಾಶ್ ರಾವ್ ನಿರ್ದೇಶನದ ಈ ಚಿತ್ರ ಸುದೀಪ್ ಸಿನಿ ಜೀವನಕ್ಕೆ ಮೊದಲ ಬ್ರೇಕ್ ನೀಡಿತು.
ಈ ಚಿತ್ರ 1999 ರಲ್ಲಿ ತೆರೆಕಂಡ ತಮಿಳು ಚಿತ್ರ `ವಾಲಿ'ಯ ರಿಮೇಕ್. ತಮಿಳಿನಲ್ಲಿ ಅಜಿತ್ ನಟಿಸಿದ್ದರು. ಎಸ್ .ಮಹೇಂದರ್ ಕನ್ನಡದಲ್ಲಿ ಅದೇ ಹೆಸರಿನಲ್ಲಿ ನಿರ್ದೇಶಿಸಿದರು. ಸುದೀಪ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
2000 ರಲ್ಲಿ ತೆರೆಕಂಡ ತಮಿಳು ಚಿತ್ರ ಖುಷಿಯನ್ನು ಕನ್ನಡದಲ್ಲಿ ಅರುಣ್ ಪ್ರಸಾದ್ ಪಿ.ಎ ಚಂದು ಹೆಸರಿನಲ್ಲಿ ರಿಮೇಕ್ ಮಾಡಿದರು. ಮೂಲದಲ್ಲಿ ವಿಜಯ್ ಮತ್ತು ಜ್ಯೋತಿಕಾ ಪಾತ್ರಗಳಲ್ಲಿ ಸುದೀಪ್ ಮತ್ತು ಸೋನಿಯಾ ಅಗರವಾಲ್ ನಟಿಸಿದರು.