ರಾಜಕುಮಾರ ಚಿತ್ರದಲ್ಲಿ ಪುನೀತ್ ರಾಜ್ ಕುಮಾರ್ ಹಾಗೂ ಪ್ರಿಯಾ ಆನಂದ್ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದರೆ, ತಮಿಳು ನಟ ಶರತ್ ಕುಮಾರ್ ಅವರು ಪುನೀತ್ ಅವರ ತಂದೆಯ ಪಾತ್ರದಲ್ಲಿ ಮಿಂಚಲಿದ್ದಾರೆ.
ಅಲ್ಲದೇ ಬಹುಭಾಷಾ ನಟ ಪ್ರಕಾಶ್ ರೈ, ಕಾಮಿಡಿ ನಟ ಚಿಕ್ಕಣ್ಣ, ಸಾಧು ಕೋಕಿಲ, ರಂಗಾಯಣ ರಘು ಮತ್ತು ರಾಕ್ ಲೈನ್ ಸುಧಾಕರ್ ಮುಂತಾದವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರಕ್ಕೆ ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡಿದ್ದಾರೆ. ವಿಜಯ್ ಕಿರಗಂದುರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
ಕಥೆ
ಮನೆಯಲ್ಲಿ ಎಲ್ಲರಿಂದಲೂ ಪ್ರೀತಿಯಿಂದ 'ಅಪ್ಪು' ಅಂತ ಕರೆಯಿಸಿಕೊಳ್ಳುವ ಸಿದ್ದಾರ್ಥ (ಪುನೀತ್ ರಾಜ್ ಕುಮಾರ್) 'ತಂದೆಗೆ ತಕ್ಕ ಮಗ'... ದೇಶ ಪ್ರೇಮಿ... ಹಾಗೂ ಕನ್ನಡದ ಕಂದ. ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರೂ, ಕರ್ನಾಟಕದ ಒಳಿತಿಗೆ ಕನ್ನಡಿಗರಿಗೆ ಸಹಾಯ ಮಾಡುವ ಸಹೃದಯಿ. ಇಂತಿಪ್ಪ ಅಪ್ಪು ಜೀವನದಲ್ಲಿ ಒಂದು ದುರ್ಘಟನೆ ಸಂಭವಿಸಿದ ನಂತರ 'ಕಸ್ತೂರಿ ನಿವಾಸ' ಅಧ್ಯಾಯ ಪ್ರಾರಂಭ. ಇದೇ 'ರಾಜಕುಮಾರ' ಚರಿತ.