ರಕ್ಕಸಪುರದೋಳ್ ಸಿನಿಮಾವನ್ನು ಜೋಗಿ ಪ್ರೇಮ್ ಅವರೊಂದಿಗೆ ಕಥೆ, ಚಿತ್ರಕಥೆ, ಮತ್ತು ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿ ಅನುಭವ ಹೊಂದಿರುವ ರವಿ ಸಾರಂಗ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಾಜ್ ಬಿ ಶೆಟ್ಟಿ ನಾಯಕನಾಗಿ ನಟಿಸಿಸುತ್ತಿದ್ದು, ಸ್ವಾತಿಷ್ಟ ಕೃಷ್ಣ ನಾಯಕಿ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ ಹಾಗೂ ಕೆ.ಎಂ ಪ್ರಕಾಶ್ ಛಾಯಾಗ್ರಹಣ ಸಿನಿಮಾಗಿದೆ. ಕನ್ನಡದ ಹೆಮ್ಮೆಯ ಸಾಹಸ ನಿರ್ದೇಶಕ ಕೆ. ರವಿವರ್ಮ ಚೊಚ್ಚಲ ಬಾರಿಗೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ರಕ್ಕಸ ಅಂದರೆ ರಾಕ್ಷಸ, ಪುರ ಅಂದರೆ ಊರು. ರಾಕ್ಷಸರೇ ಇರುವ ಊರು ಎಂಬುದು ಶೀರ್ಷಿಕೆಯ ಅರ್ಥ. ಅಂದ್ಹಾಗೆ ರಕ್ಕಸಪುರದೋಳ್ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಮೂಹೂರ್ತ: ರಕ್ಕಸಪುರದೋಳ್ ಸಿನಿಮಾದ ಮುಹೂರ್ತ ಸಮಾರಂಭ 2024ರ ಆಗಸ್ಟ್ 17ರಂದು ಬೆಂಗಳೂರಿನ ನೆಟ್ಟಕಲ್ಲಪ್ಪ ಸರ್ಕಲ್‌ನಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು.