ರೋಮ್ಯಾಂಟಿಕ್ ಹಾರರ್ ಥ್ರಿಲ್ಲರ್ ರತ್ನಮಂಜರಿ ಚಿತ್ರವನ್ನು ಪ್ರಸಿದ್ಧ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ರಾಜ್ ಚರಣ್ ಮತ್ತು ಅಕಿಲಾ ಪ್ರಕಾಶ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರವನ್ನು ನಟರಾಜ್ ಹಳೇಬೀಡು ಮತ್ತು ಸಂದೀಪ್ ಕುಮಾರ್ ನಿರ್ಮಿಸಿದ್ದರೆ, ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.ನಿಜಘಟನೆಗಳಾಧಾರಿತ ಈ ಚಿತ್ರ ಅಮೇರಿಕಾದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರ ಪ್ರಾಮಾಣಿಕ ಪ್ರಯತ್ನವಾಗಿದೆ ಚಿತ್ರದ ಹಾಡುಗಳು ಪುನೀತ್ ರಾಜಕುಮಾರ್, ವಿಜಯ ಪ್ರಕಾಶ್ ,ಸಂಜಿತ್ ಹೆಗಡೆ ಕಂಠಸಿರಿಯಲ್ಲಿ ಮೂಡಿಬಂದಿದ್ದು ಚಿತ್ರಕ್ಕೆ ಹರ್ಷವರ್ಧನ್ ರಾಜ್ ಸಂಗೀತ ನೀಡಿದ್ದಾರೆ.
ಚಿತ್ರದ ನಾಯಕ ಸಿದ್ಧಾಂತ್ ಅಮೇರಿಕಾದಲ್ಲಿ ನೆಲಸಿರುವ ಕನ್ನಡಿಗ. ಫೋಟೊಗ್ರಾಫಿಕ್ ಮೆಮರಿ ಹೊಂದಿರುವ ಸಿದ್ಧಾಂತ್ ವೃತ್ತಿಯಲ್ಲಿ ಸಸ್ಯಶಾಸ್ತ್ರಜ್ಞ. ಸಿದ್ಧಾಂತ್ ಮತ್ತು ಅವನ ಪತ್ನಿ ಇಂಡಿಯಾಕ್ಕೆ ಬಂದಾಗ ಇವರ ಪಕ್ಕದ ಮನೆಯಲ್ಲಿ ವಾಸವಿದ್ದ ಕೊಡುಗು ಮೂಲದ ದಂಪತಿಗಳ ಕೊಲೆಯಾಗುತ್ತದೆ. ಈ ಕೊಲೆಯ ಜಾಡನ್ನು ಹಿಡಿದು ಮಡಿಕೇರಿಗೆ ಬರುವ ನಾಯಕ ಸಿದ್ಧಾಂತ್ ರತ್ನಮಂಜರಿ ಎಸ್ಟೇಟ್ ನಲ್ಲಿ ವಾಸಿಸುತ್ತಿರುತ್ತಾನೆ. ಇಲ್ಲಿ ಅವನಿಗೆ ಹಲವು ವಿಚಿತ್ರ ಅನುಭವಗಳಾಗುತ್ತವೆ.
ಇಲ್ಲಿಂದ ಚಿತ್ರ ಫ್ಲ್ಯಾಷ್ ಬ್ಯಾಕ್ ಗೆ ಹೋಗುತ್ತದೆ. ಇಲ್ಲಿ ಸಿದ್ಧಾಂತ್ ಗೆ ಹಲವು ಸತ್ಯಗಳು ಗೊತ್ತಾಗುತ್ತವೆ. ಸೇನೆಯಿಂದ ವಾಪಸ್ಸು ಬರುವ ತಂದೆಯನ್ನು ನೋಡಿಕೊಳ್ಳದೇ ಮಗ ತನ್ನ ಹೆಂಡತಿಯೊಡನೆ ಅಮೇರಿಕಾದಲ್ಲಿ ವಾಸಿಸುತ್ತಿರುತ್ತಾನೆ. ಇಲ್ಲಿ ತಂದೆ ಒಬ್ಬ ಮಗುವನ್ನು ದತ್ತು ತೆಗೆದುಕೊಳ್ಳುತ್ತಾನೆ. ಇವೆಲ್ಲ ಘಟನೆಗಳು ಹೇಗೆ ಆ ಕೊಲೆಗೆ ಸಂಬಂಧಿಸಿವೆ ಎಂಬುದು ಚಿತ್ರದ ಕಥೆ.