ಅಜಿತ್ ಕುಮಾರ್ ಜೆ ನಿರ್ದೇಶನದಲ್ಲಿ ಮೂಡಿಬಂದ `ರೈಮ್ಸ್' ಚಿತ್ರದಲ್ಲಿ ಶುಭಾ ಪೂಂಜಾ, ಅಜಿತ್ ಜಯರಾಜ್ ಮತ್ತು ಸುಷ್ಮಾ ನಾಯರ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಜ್ಞಾನಶೇಖರ್ ಸಿದ್ದಯ್ಯ ಮತ್ತು ರಮೇಶ್ ಆರ್ಯ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.ಶಕ್ತಿ ಸಾಕ್ ಚಿತ್ರ್ಕಕೆ ಸಂಗೀತ ನೀಡಿದ್ದಾರೆ.ಕಥೆ: ಒಬ್ಬ ಪೋಲಿಸ್ ಅಧಿಕಾರಿ ಅಜಯ್ ಕುಮಾರ್ ಮತ್ತು ಕ್ರೈಮ್ ಜರ್ನಲಿಸ್ಟ್ ಅವಂತಿಕಾ ಸರಣಿ ಕೊಲೆಗಳ ತನಿಖೆಯನ್ನು ಕೈಗೊಳ್ಳುತ್ತಾರೆ. ಈ ಕೊಲೆಗಳ ರೈಮ್ಸ್ ನ್ನು ಬಿಡಿಸಿ, ತನಿಖೆಯನ್ನು ಪೂರ್ಣಗೊಳಿಸುತ್ತಾರಾ ಎಂಬುದು ಚಿತ್ರದ ಕಥೆ.