ಪದ್ಮ ಮಗನ್ ನಿರ್ದೇಶನದಲ್ಲಿ ಮೂಡಿಬಂದಿರುವ ರೋಮ್ಯಾಂಟಿಕ್ ಥ್ರಿಲ್ಲರ್ `ರೂಮ್' ಚಿತ್ರದಲ್ಲಿ ಅಭಿಷೇಕ್ ವರ್ಮಾ, ಮನೋಚಿತ್ರಾ ಮತ್ತು ರಾಕೇಶ್ ಅಡಿಗ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಶ್ವಿನ್ ಕೆ ಬಂಡವಾಳ ಹೂಡಿದ್ದಾರೆ. ಈ ಚಿತ್ರ ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ಮೂಡಿಬಂದಿದೆ.
ಕಥೆ
ಚಿತ್ರದ ನಾಯಕಿ ಭರಧಿ ತನ್ನ ಸೈಕೋಪಾತ್ ಗಂಡನಿಂದ ನಿತ್ಯ ಟಾರ್ಚರ್ ಗೆ ಒಳಗಾಗುತ್ತಿರುತ್ತಾಳೆ. ಇದರಿಂದ ಅವಳು ಲೈಂಗಿಕತೆಯಲ್ಲಿ ಸಂಪೂರ್ಣ ಆಸಕ್ತಿ ಕಳೆದು ಕೊಂಡಿರುತ್ತಾಳೆ. ಹಾಗೇ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ಯುವಕನೊಬ್ಬ ಕಾಮ ಭಾವನೆಗಳಿಂದ ಭಾಧೆಗೊಳಗಾಗಿರುತ್ತಾನೆ. ಒಂದು ವಿಚಿತ್ರ ಸನ್ನಿವೇಶವೊಂದರಲ್ಲಿ ಇಬ್ಬರು ಒಂದು ಬಾತ್ ರೂಮ್ ನಲ್ಲಿ ಲಾಕ್ ಆಗುತ್ತಾರೆ. ಅವರಿಬ್ಬರ ಮಧ್ಯೆ ನೆಡೆಯುವ ಘಟನೆಗಳು ಹಲವು ಥ್ರಿಲ್ಲರ್ ಘಟನೆಗಳಿಗೆ ಕಾರಣವಾಗುತ್ತವೆ.