ಜೋಸೈಮನ್ ನಿರ್ದೇಶನದ ಸಾಹಸಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಪೋಲಿಸ್ ಪಾತ್ರದಲ್ಲಿ ಮಿಂಚಿದರು. ಕುಣಿಗಲ ನಾಗಭೂಷಣ ಚಿತ್ರಕ್ಕೆ ಸಂಭಾಷಣೆ ಬರೆದರೆ, ಚೆಲ್ಲಪಿಲ್ಲಾ ಸತ್ಯಂ ಸಂಗೀತ ನೀಡಿದರು. ಕಾಜಲ್ ಕಿರಣ್, ರಾಜ್ಯ ಲಕ್ಷ್ಮಿ, ವಜ್ರಮುನಿ, ಪ್ರಭಾಕರ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದರು.
ಚಿತ್ರದಲ್ಲಿ ವಿಷ್ಣುವರ್ಧನ್ ಬಾಲ್ಯದಲ್ಲಿ ತನ್ನ ಕುಟುಂಬಕ್ಕೆ ಆದ ಅನ್ಯಾಯದ ಸೇಡಿನ ಜೊತೆಗೆ ತನ್ನ ಪೋಲಿಸ್ ಕರ್ತವ್ಯವನ್ನು ನಿಭಾಯಿಸುವ ಪಾತ್ರವನ್ನು ನಿಭಾಯಿಸಿದ್ದರು.