ಮಹೇಶ್ ಸುಖಧರೆ ನಿರ್ದೇಶನದಲ್ಲಿ ಮೂಡಿಬಂದ ಈ ಚಿತ್ರದಲ್ಲಿ ಸಿ.ಪಿ.ಯೋಗೇಶ್ವರ್ ಮತ್ತು ಸಾಕ್ಷಿ ಶಿವಾನಂದ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಚಿತ್ರಕ್ಕೆ ದೇವ ಸಂಗೀತ ನೀಡಿದ್ದರು.
ಆಗ ತಾನೇ ಮದುವೆಯಾದ ಸೈನಿಕನೊಬ್ಬ ಕಾರ್ಗಿಲ್ ಯುದ್ಧದಲ್ಲಿ ಹೋರಾಡಿ ಮಾರಣಾಂತಿಕವಾಗಿ ಗಾಯಗೊಳ್ಳುತ್ತಾನೆ. ನಂತರ ಅವನು ಮಡಿದನೆಂದು ತಿಳಿದು ಅವನ ಕುಟಂಬ ಅವನನ್ನು ಮರೆತಾಗ, ಬೇರೆಯದೇ ಮುಖಚರ್ಯೆಯಿಂದ ಬಂದ ಅವನ್ನು ಒಪ್ಪಲು ಅವನ ಕುಟುಂಬ ಕೂಡ ನಿರಾಕರಿಸುತ್ತದೆ.