ವೀರೇಂದ್ರ ಶೆಟ್ಟಿ ನಿರ್ದೇಶನ ಮಾಡಿ ನಾಯಕನಾಗಿ ನಟಿಸಿರುವ ಚಿತ್ರ ಸವರ್ಣದೀರ್ಘ ಸಂಧಿಯಲ್ಲಿ ಕೃಷ್ಣಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ವೀರೇಂದ್ರ ಶೆಟ್ಟಿ, ಮನೋ ಮೂರ್ತಿ ಮುಂತಾದವರು ಬಂಡವಾಳ ಹೂಡಿದ್ದಾರೆ. ಮನೋ ಮೂರ್ತಿ ಚಿತ್ರಕ್ಕೆ ಸಂಗೀತ ಕೂಡ ನೀಡಿದ್ದಾರೆ.
ಅರ್ಧಂಬರ್ಧ ಶಿಕ್ಷಣ ಪಡೆದ ಮುದ್ದಣ್ಣ ಒಬ್ಬ ಗ್ಯಾಂಗಸ್ಟರ್ . ಹಾಗೇ ವ್ಯಾಕರಣ ಪ್ರಿಯ. ತುಂಬಾ ಪ್ಲ್ಯಾನ್ ಮಾಡಿ ಕ್ರೈಮ್ ಮಾಡುವ ಇವರನ್ನು ಪೋಲಿಸ್ ರು ಸುಳಿವು ಸಿಗದ ಕಾರಣ ಹಿಡಿಯಲು ವಿಫಲವಾಗುತ್ತಾರೆ. ಹೀಗೆ ಇರುವಾಗ ಮುದ್ದಣ್ಣ ಅಮೃತವರ್ಷಿಣಿ ಎಂಬ ಗಾಯಕಿಯ ಪ್ರೀತಿಯಲ್ಲಿ ಬೀಳುತ್ತಾನೆ.