ವಿಕಾಸ್ ಪುಷ್ಪಗಿರಿ ನಿರ್ದೇಶನದ 'ಸ್ಕ್ಯಾಮ್ 1770' ಸಿನಿಮಾದಲ್ಲಿ ರಂಜನ್ ನಾಯಕನಾಗಿ ನಟಿಸುತ್ತಿದ್ದಾರೆ. ಈ ಸಿನಿಮಾ ಶಿಕ್ಷಣ ವ್ಯವಸ್ಥೆ ಮತ್ತು ವಿದ್ಯಾರ್ಥಿಗಳನ್ನು ಕುರಿತಾದ ಕಥಾಹಂದರ ಹೊಂದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಚಿತ್ರದಲ್ಲಿ ದಡ್ಡ ಪ್ರವೀಣ ಎಂಬ ಪಾತ್ರದ ಮೂಲಕ ಖ್ಯಾತಿ ಗಳಿಸಿದ್ದ ನಟ ರಂಜನ್ ಈ ಚಿತ್ರದ ಮುಖಾಂತರ ಹೀರೋ ಆಗಿ ಎಂಟ್ರಿಕೊಡುತ್ತಿದ್ದಾರೆ. ಆರ್ ದೇವರಾಜ್ ತಮ್ಮ ಡಿ ಕ್ರಿಯೆಷನ್ಸ್ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದಲ್ಲಿ ರಂಜನ್ ಜೊತೆಗೆ ಬಿ ಸುರೇಶ್, ಅವಿನಾಶ್, ಶ್ರೀನಿವಾಸ್ ಪ್ರಭು, ರಮೇಶ್ ಪಂಡಿತ್, ರಘು ಶಿವಮೊಗ್ಗ, ನಾರಾಯಣ ಸ್ವಾಮಿ, ಉಗ್ರಂ ಸಂದೀಪ್, ಹರಿಣಿ, ಹಂಸ, ಸುನೇತ್ರಾ ಪಂಡಿತ್, ಶೃತಿ ನಾಯಕ ಮುಂತಾದವರು ಅಭಿನಯಿಸಿದ್ದಾರೆ.
'ಸ್ಕ್ಯಾಮ್ 1770' ಚಿತ್ರಕ್ಕೆ ಡಾ.ಇಂದು ನಟೇಶ್ ಹಾಗೂ ವಕೀಲರಾದ ನೇತ್ರಾವತಿ ಕಥೆ ಬರೆದಿದ್ದಾರೆ. ಚಿತ್ರಕಥೆಯನ್ನು ಶಂಕರ್ ರಾಮನ್ ಮತ್ತು ವಿಕಾಸ್ ಪುಪ್ಷಗಿರಿ ಬರೆದಿದ್ದಾರೆ. ಸತೀಶ್ ಆರ್ಯನ್ ಸಂಗೀತ ನಿರ್ದೇಶನ ಮಾಡಿದ್ದು, ಶೊಯೆಬ್ ಛಾಯಾಗ್ರಹಣ ಮಾಡಿದ್ದಾರೆ.