ಸಿದ್ಧಿ ಸಮಾಜಿಕವಾಗಿ ಹಿಂದುಳಿದ ಅಸ್ಪೃಶ್ಯ ವಿಧವೆ. ತಾನು ತೀರಿಕೊಂಡಾಗ ತನ್ನ ಹೆಣ ಒಂದು ಉತ್ತಮ ಒಳ್ಳೆಯ ಸೀರೆಯಲ್ಲಿದ್ದರೆ ತನಗೆ ಶಿವನ ವಾಸಸ್ಥಾನವಾದ ಕೈಲಾಸ ಪ್ರಾಪ್ತಿಯಾಗುವುದು ಎಂಬ ನಂಬಿಕೆ. ಅದಕ್ಕಾಗಿ ತನಗಾಗಿ ಒಂದು ಒಳ್ಳೆಯ ಸೀರೆ ಹುಡುಕಲು ಹೊರಟಾಗ ಹಳ್ಳಿಯಲ್ಲಿ ಎದುರಿಸುವ ಸಮಸ್ಯೆಗಳನ್ನು ಚಿತ್ರ ತೋರಿಸುತ್ತದೆ. ನಿಧನದ ನಂತರ ಕೈಲಾಸ ಪ್ರಾಪ್ತಿಗಾಗಿ ಸೀರೆಯನ್ನು ಅರಿಸಿ ಹೋಗುವ ಸಿದ್ಧಿಯ ಕಥೆಯೇ ಸಿದ್ಧಿ ಸೀರೆ ಚಿತ್ರದ ಕಥಾವಸ್ತು.