ಕುಲದೀಪಕ್ ಮತ್ತು ಮನಸ್ವಿನಿ ಪ್ರೇಮಾ ಮುಖ್ಯ ಪಾತ್ರದಲ್ಲಿ ನಟಿಸಿರುವ `ಸಿಂಹ ಸೇನ' ಚಿತ್ರವನ್ನು ಎಸ್ ರಾಮ್ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಸುರೇಶ್ ರೆಡ್ಡಿ ಮತ್ತು ನರೇಂದ್ರ ಚೌಧರಿ ಬಂಡವಾಳ ಹೂಡಿದ್ದಾರೆ. ವಿನುಮನಸು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ಈ ಚಿತ್ರದಲ್ಲಿ ಹೇಗೆ ವಿಕ್ಕಿ ಎಂಬ ಯುವಕ ಮತ್ತು ಅವನ ಸ್ನೇಹಿತರು ಸನ್ನಿವೇಶಗಳಲ್ಲಿ ಸಿಲುಕಿ ಹೇಗೆ ಭೂಗತ ಲೋಕವನ್ನು ಪ್ರವೇಶಿಸುತ್ತಾರೆ ಎಮಬುದನ್ನು ತೋರಿಸಲಾಗಿದೆ. ಚಿತ್ರದ ಕತೆ ನಿಜಘಟನೆಗಳಾಧಾರಿತವಾಗಿದೆ.