ಸ್ಯಾಂಡಲ್ವುಡ್ ಕ್ವೀನ್ ರಮ್ಯಾ ಅವರ ಮೊದಲ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಿರುವ ಮೊದಲ ಸಿನಿಮಾ ಸ್ವಾತಿ ಮುತ್ತಿನ ಮಳೆ ಹನಿಯೇ. ಈ ಸಿನಿಮಾವನ್ನು ರಾಜ್ ಶೆಟ್ಟಿ ನಿರ್ದೇಶಿಸಿ, ನಟಿಸಿದ್ದಾರೆ. ಸಿರಿ ರವಿಕುಮಾರ್ ಸಿನಿಮಾ ನಾಯಕಿ. ಮಿದುನ್ ಮುಕುಂದ್ ಈ ಸಿನಿಮಾಗೆ ಸಂಗೀತ ನೀಡಿದ್ದು, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಮಾಡಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಚಿತ್ರರರಂಗದಿಂದ ದೂರ ಉಳಿದಿದ್ದ ನಟಿ ರಮ್ಯಾ, 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಮೂಲಕ ನಿರ್ಮಾಪಕಿಯಾಗಿ ಕಮ್‌ಬ್ಯಾಕ್ ಮಾಡಿದ್ದಾರೆ.
ಬಿಡುಗಡೆ: ಸ್ವಾತಿ ಮುತ್ತಿನ ಮಳೆ ಹನಿಯೇ 2023ರ ನವೆಂಬರ್ 24ರಂದು ಬಿಡುಗಡೆ ಆಯಿತು.
ಕಥೆ: ಇದು ಪ್ರೇರಣಾ ಹಾಗೂ ಅನಿಕೇತ್ ನಡುವಿನ ಭಾವನಾತ್ಮಕ ಜರ್ನಿ. ಪ್ರೇರಣಾ ವಾಸಿ ಮಾಡಲು ಸಾಧ್ಯವಾಗದೇ ಇರುವಂತಹ ಖಾಯಿಲೆಯಿಂದ ಬಳಲುತ್ತಿರುವವರನ್ನು ಸಾಯುವುದಕ್ಕೆ ಸಿದ್ಧಪಡಿಸುವ ಕೌನ್ಸಿಲರ್. ಆಸರೆ ಅನ್ನೋ ಸಂಸ್ಥೆಯಲ್ಲಿ ಪ್ರೇರಣಾ ಸಾಯುವುದಕ್ಕೆ ಮಾಸಿಕವಾಗಿ ಸಿದ್ಧಪಡಿಸುತ್ತಿರುತ್ತಾರೆ. ಈಕೆಯ ವೃತ್ತಿ ಬದುಕು ಹಾಗೂ ವೈಯಕ್ತಿಕ ಬದುಕು ಎರಡರಲ್ಲೂ ಬದಲಾವಣೆ ಇಲ್ಲದೆ ಬಳಲುತ್ತಿರುತ್ತಾರೆ. ಈ ಕೌನ್ಸಿಲ್ ಜೀವನದಲ್ಲಿ ಕೊನೆಯ ದಿನಗಳನ್ನು ಎಣಿಸುತ್ತಿರುವ ಅನಿಕೇತ್ ಎಂಟ್ರಿ ಆಗುತ್ತೆ. ಇಲ್ಲಿಂದ ಪ್ರೇರಣಾ ಬದುಕು ಹೇಗೆಲ್ಲ ಬದಲಾಗುತ್ತೆ ಅನ್ನೋದು ಸಿನಿಮಾ ಕಥೆ.