ಸೈರಾ ನರಸಿಂಹ ರೆಡ್ಡಿ (2019)
ಸೈರಾ ನರಸಿಂಹ ರೆಡ್ಡಿ ಕಥೆ
ಸುರೇಂದರ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿರುವ ಮೆಗಾಸ್ಟಾರ್ ಚಿರಂಜೀವಿ ಸರ್ಜಾರವರ 150 ನೇ ಚಿತ್ರವಾಗಿದೆ. ರಾಮಚರಣ್ ತೇಜಾ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು, ನಯನತಾರಾ,ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರ ಸ್ವಾತಂತ್ರ ಹೋರಾಟಗಾರ ರಾಯಲಸೀಮೆಯ ಉಯ್ಯಲವಾಡ ನರಸಿಂಹ ರೆಡ್ಡಿ ಜೀವನಾಧಾರಿತವಾಗಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಬಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸುದೀಪ್ ಹೋರಾಟಗಾರ ಅವುಕು ರಾಜು ಪಾತ್ರವನ್ನು ಮಾಡಿದ್ದಾರೆ.
ನರಸಿಂಹ ರೆಡ್ಡಿ ಆರುವತ್ತು ಹಳ್ಳಿಗಳನ್ನು ಹೊಂದಿದ ರೇನಾಡು ಸಮ್ರಾಜ್ಯದ ಪಾಳೇಗಾರ. ತನ್ನ ಗುರು ಗೋಸಾಯಿ ವೆಂಕಣ್ಣನ ಬಳಿ ಸಕಲ ಯುದ್ಧ ಕಲೆಗಳನ್ನು ಕಲಿಯುತ್ತಾನೆ. ಇದೇ ಸಮಯದಲ್ಲಿ ಲಕ್ಷ್ಮಿ (ತಮನ್ನಾ) ಎಂಬ ನರ್ತಕಿಯ ಪ್ರೀತಿಯಲ್ಲಿ ಬೀಳುತ್ತಾನೆ. ಆದರೆ ನರಸಿಂಹ ರೆಡ್ಡಿಗೆ ಬಾಲ್ಯದಲ್ಲಿಯೇ ಸಿದ್ಧಮ್ಮ (ನಯನತಾರ) ಜೊತೆ ಮದುವೆಯಾಗಿರುತ್ತದೆ.ಬ್ರಿಟಿಷ್ ರು ವಿಧಿಸುತ್ತಿದ್ದ ಕ್ರೂರ ತೆರಿಗೆ ಸುಂಕವನ್ನು ವಿರೋಧಿಸಿ 1840 ರಲ್ಲಿ ತನ್ನ ಸುತ್ತಲಿನ ಪಾಳೇಗಾರರನ್ನು ಕೂಡಿಸಿಕೊಂಡು ಬ್ರಿಟಿಷ್ ರ ವಿರುದ್ಧ ಸಮರ ಸಾರುತ್ತಾನೆ. ಇವನ ಹೋರಾಟದಲ್ಲಿ ಪಾಳೇಗಾರರಾದ ಅವುಕು ರಾಜು (ಸುದೀಪ್), ವೀರ ರೆಡ್ಡಿ (ಜಗಪತಿ ಬಾಬು), ಬಸಿ ರೆಡ್ಡಿ (ರವಿ ಕಿಶನ್), ರಾಜ ಪಾಂಡಿ ( ವಿಜಯ್ ಸೇತುಪತಿ) ಕೈ ಜೋಡಿಸುತ್ತಾರೆ. ಹೇಗೆ ಈ ಹೋರಾಟ, ಭಾರತದ ಐತಿಹಾಸಿಕ 1857 ರ ಸ್ವಾತಂತ್ಯ ಸಂಗ್ರಾಮಕ್ಕೆ ಮುನ್ನುಡಿ ಬರೆಯುತ್ತದೆ ಎಂಬುದು ಚಿತ್ರದ ಜೀವಾಳ. ನರಸಿಂಹ ರೆಡ್ಡಿಯ ಕಥೆ ಜಾನ್ಸಿ ರಾಣಿ ಲಕ್ಷ್ಮಿಬಾಯಿ (ಅನುಷ್ಕಾ ಶೆಟ್ಟಿ) ಪಾತ್ರದ ಮೂಲಕ ಆರಂಭಿಸುತ್ತದೆ.