Kannada»Movies»Syeraa Narasimha Reddy
  ಸೈರಾ ನರಸಿಂಹ ರೆಡ್ಡಿ

  ಸೈರಾ ನರಸಿಂಹ ರೆಡ್ಡಿ

  Release Date : 02 Oct 2019
  3/5
  Critics Rating
  4/5
  Audience Review

  ಸುರೇಂದರ್ ರೆಡ್ಡಿ ನಿರ್ಮಾಣದಲ್ಲಿ ಮೂಡಿಬಂದಿರುವ ಮೆಗಾಸ್ಟಾರ್ ಚಿರಂಜೀವಿ ಸರ್ಜಾರವರ 150 ನೇ ಚಿತ್ರವಾಗಿದೆ. ರಾಮಚರಣ್ ತೇಜಾ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಅಮಿತಾಭ್ ಬಚ್ಚನ್, ಕಿಚ್ಚ ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು, ನಯನತಾರಾ,ತಮನ್ನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ.ಈ ಚಿತ್ರ ಸ್ವಾತಂತ್ರ ಹೋರಾಟಗಾರ ರಾಯಲಸೀಮೆಯ ಉಯ್ಯಲವಾಡ ನರಸಿಂಹ ರೆಡ್ಡಿ ಜೀವನಾಧಾರಿತವಾಗಿದೆ. ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂ ಬಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಿದೆ. ಸುದೀಪ್ ಹೋರಾಟಗಾರ ಅವುಕು ರಾಜು ಪಾತ್ರವನ್ನು ಮಾಡಿದ್ದಾರೆ.

  ನರಸಿಂಹ ರೆಡ್ಡಿ ಆರುವತ್ತು ಹಳ್ಳಿಗಳನ್ನು ಹೊಂದಿದ ರೇನಾಡು ಸಮ್ರಾಜ್ಯದ ಪಾಳೇಗಾರ. ತನ್ನ ಗುರು ಗೋಸಾಯಿ ವೆಂಕಣ್ಣನ ಬಳಿ ಸಕಲ ಯುದ್ಧ ಕಲೆಗಳನ್ನು ಕಲಿಯುತ್ತಾನೆ. ಇದೇ ಸಮಯದಲ್ಲಿ ಲಕ್ಷ್ಮಿ (ತಮನ್ನಾ) ಎಂಬ ನರ್ತಕಿಯ ಪ್ರೀತಿಯಲ್ಲಿ ಬೀಳುತ್ತಾನೆ....

  • ಸುರೇಂದರ್ ರೆಡ್ಡಿ
   Director
  • ರಾಮಚರಣ್ ತೇಜಾ
   Producer
  • ಶ್ರೇಯಾ ಘೋಷಾಲ್
   Singer
  • ಸುನಿಧಿ ಚೌಹಾಣ್
   Singer
  • ವಿಜಯ್ ಪ್ರಕಾಶ್
   Singer
  • ಕನ್ನಡ ಫಿಲ್ಮೀಬೀಟ್ -ಕಣ್ಮನ ಸೆಳೆಯುವ ಐತಿಹಾಸಿಕ ಮೆಗಾ ಧಾರವಾಹಿ
   3/5
   ವಾಸ್ತವಾಂಶದಲ್ಲಿ ರಾಜಿ ಮಾಡಿಕೊಳ್ಳದೇ, ಈಗಿನ ಟ್ರೆಂಡಿಗೆ ಬೇಕಾಗಿರುವ ಕಮರ್ಷಿಯಲ್ ಅಂಶಗಳನ್ನು, ಅಲ್ಲಲ್ಲಿ ಹದವಾಗಿ ಬೆರೆಸಿ, ನಿರ್ದೇಶಕರು, ಚಿತ್ರವನ್ನು ಪ್ರೇಕ್ಷಕರ ಮುಂದಿಟ್ಟಿದ್ದಾರೆ.ಬಾಹುಬಲಿ ಚಿತ್ರವನ್ನು ಮೀರಿಸುವಂತೆ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಸುದೀಪ್ ಅಕ್ಷರಸಃ ಪರಕಾಯ ಪ್ರವೇಶ ಮಾಡಿದ್ದಾರೆ.ಚಿತ್ರ ಅಲ್ಲಲ್ಲಿ ಹಳಿ ತಪ್ಪುತ್ತದೆ, ಸ್ಲೋ ಎನಿಸುತ್ತದೆ.ಆದರೂ, ಮೊದಲಾರ್ಥದಲ್ಲಿ ಕೆಲವೊಂದು ದೃಶ್ಯಗಳಿಗೆ ಕತ್ತರಿ ಪ್ರಯೋಗಿಸಬಹುದಿತ್ತು.
  • ಪ್ರಜಾವಾಣಿ
   0/5
   ದೃಶ್ಯದಿಂದ ದೃಶ್ಯಕ್ಕೆ ಅಗತ್ಯವಿರುವ ಬಂಧ ಸಿನಿಮಾದಲ್ಲಿ ಇಲ್ಲ. ಚಿತ್ರಕಥೆಯ ಹೆಣಿಗೆಯಲ್ಲಿ ಎದ್ದು ಕಾಣುವ ಲೋಪವಿದು. ಹೀಗಾಗಿಯೇ ಮೊದಲರ್ಧ ವೀಪರೀತ ಎಳೆದಂತಾಗುತ್ತದೆ. ಉತ್ತಮ ತಂತ್ರಗಾರಿಕೆ, ದುರ್ಬಲ ಶಿಲ್ಪ -ಎರಡನ್ನೂ ಸಿನಿಮಾಗೆ ಅನ್ವಯಿಸಿ ಹೇಳಬಹುದು.
  • ವಿಜಯ ಕರ್ನಾಟಕ
   3.5/5
   64 ವರ್ಷದ ಹರೆಯ ಚಿರಂಜೀವಿ ಅವರಿಗೆ ವಯಸ್ಸಿನ ಹಂಗೇ ಇಲ್ಲದಂತೆ ಕಾಣುತ್ತದೆ. ನರಸಿಂಹರೆಡ್ಡಿ ಪಾತ್ರದಲ್ಲಿ ಅವರು ಲೀನವಾಗಿರುವ ರೀತಿಯನ್ನು ನೋಡಿದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಪ್ರತಿ ದೃಶ್ಯಕ್ಕೂ ಅವರು ನ್ಯಾಯ ಸಲ್ಲಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X