ಗಿರೀಶ್ ಕಾಸರವಳ್ಳಿ ನಿರ್ದೇಶಿಸಿ ನಿರ್ಮಿಸಿರುವ ತಬರನ ಕಥೆ ಚಿತ್ರ ಪೂರ್ಣಚಂದ್ರ ತೇಜಸ್ವಿ ಯವರ ಕಾದಂಬರಿ ಆಧಾರಿತವಾಗಿದೆ. ಚಾರು ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಎಲ್ ವೈದ್ಯನಾಥನ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.
ತಬರ ಎಂಬ ಸರ್ಕಾರಿ ನೌಕರ ನಿವೃತ್ತಿಯ ಬಳಿಕ ತನ್ನ ಪಿಂಚಣಿಗೋಸ್ಕರ ವಿಪರೀತ ಅಲೆದಾಡುವ ಕೆಟ್ಟ ಪರಿಸ್ಥಿತಿಯಲ್ಲಿ ರೋಸಿ ಹೋಗಿ ಕೊನೆಗೆ ತನ್ನ ಹೆಂಡತಿಯನ್ನು ಕಳೆದುಕೊಳ್ಳುತ್ತಾನೆ. ಈ ಚಿತ್ರ 34 ನೇ ರಾಷ್ಟ್ರೀಯ ಪ್ರಶಸ್ತಿ ಪಡೆಯಿತು.