ತಾಜ್ ಮಹಲ್ ಚಿತ್ರದಲ್ಲಿ ಅಜಯ್ ರಾವ್ ನಾಯಕನಾಗಿ ಮತ್ತು ಪೂಜಾ ಗಾಂಧಿ ನಾಯಕಿಯಾಗಿ ಮುಖ್ಯ ಪಾತ್ರದಲ್ಲಿ ಅಭಿನಹಿಸಿದ್ದಾರೆ. ಅನಂತ್ ನಾಗ್, ಪದ್ಮಜಾ ರಾವ್, ರಂಗಾಯಣ ರಘು, ಪದ್ಮಿನಿ ಪ್ರಕಾಶ್, ಸುರೇಶ್ ಮಂಗಳೂರು, ಆಶೋಕ್, ಸುನಿಲ್ ರಾವ್ ಮೊದಲಾದವರ ತಾರ ಬಳಗವೇ ಚಿತ್ರದಲ್ಲಿದೆ.ಆರ್ ಚಂದ್ರು ಅವರ ನಿರ್ದೇಶನದ ಮತ್ತು ಜಿ.ಅಭಿಮಾನ್ ರಾಯ್ ಅವರ ಸಂಗೀತ ಸಂಯೋಜನೆ ಚಿತ್ರದಲ್ಲಿದೆ.
ಹಳ್ಳಿಯಿಂದ ಉನ್ನತ ವ್ಯಾಸಂಗಕ್ಕಾಗಿ ಪಟ್ಟಣಕ್ಕೆ ಬಂದ ಬಡ ಇಂಜಿನಿಯರಿಂಗ್ ವಿಧ್ಯಾರ್ಥಿಯೊಬ್ಬ ಒಂದು ಹುಡುಗಿ ಪ್ರೀತಿಯಲ್ಲಿ ಬಿದ್ದು ಪ್ರೀತಿ ಮತ್ತು ಶಿಕ್ಷಣ ಎರಡರಲ್ಲೂ ವಿಫಲನಾಗಿ ತನ್ನ ಹಳ್ಳಿಗೆ ಮರಳುವಾಗ ಅಫಘಾತಕ್ಕೀಡಾಗಿ ನಿಧನವಾಗುತ್ತಾನೆ.