ತಾಜ್ ಸಿನಿಮಾವನ್ನು ರಾಜರತ್ನ ಬಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಷಣ್ಮುಖ ಜೈ ನಾಯಕನಾಗಿ ಹಾಗೂ ಅಪ್ಸರಾ ರಾಮಕೃಷ್ಣ ನಾಯಕಿಯಾಗಿ ನಟಿಸಿದ್ದಾರೆ. ಉಳಿದಂತೆ ಪದ್ಮ ವಾಸಂತಿ, ಶೋಭರಾಜ್, ವರ್ಧನ್, ಬಲ ರಾಜ್ವಾಡಿ, ಕಡ್ಡಿ ವಿಶ್ವ, ಸೂರಜ್ ಕಾಮಿಡಿ ಕಿಲಾಡಿಗಳು ಮುಂತಾದವರು ತಾರಾಗಣದಲ್ಲಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ, ದೀಪಕ್ ಕುಮಾರ್ ಜೆ.ಕೆ ಹಾಗೂ ಶ್ರೀ ಜವಳಿ ಸಂಕಲನ ಚಿತ್ರಕ್ಕಿದೆ. ನಾಯಕ ಷಣ್ಮುಖ ಜೈ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಇದೊಂದು ನೈಜ ಘಟನೆಯಾಧಾರಿತ ಸಿನಿಮಾ.